ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸಲು ಕೇಂದ್ರ ತಂಡ ಜಿಲ್ಲೆಗೆ

ಕಾಸರಗೋಡು: ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಗೋದಾಮುಗಳಲ್ಲಿ  ತೆಗೆದಿರಿಸಿರುವ ಎಂಡೋಸಲ್ಫಾನ್ ನಿಷ್ಕ್ರಿಯ ಗೊಳಿಸುವ ಬಗ್ಗೆ ಪರಿಶೀಲಿಸಲು ಕೇಂದ್ರ ಮಲಿನೀಕರಣ ನಿಯಂತ್ರಣ ಬೋರ್ಡ್ (ಸಿಪಿಸಿಬಿ) ನೇತೃತ್ವದಲ್ಲಿ ರುವ ತಜ್ಞರ ತಂಡ ಜಿಲ್ಲೆಗೆ ತಲುಪಿದೆ. ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್‌ನ ನಿರ್ದೇಶ ಪ್ರಕಾರ ಈ ತಂಡ ತಲುಪಿದ್ದು, ಇದರಲ್ಲಿ ದಕ್ಷಿಣ ವಲಯ ರೀಜ್ಯನಲ್ ಡೈರೆಕ್ಟರ್ ಡಾ. ಜೆ. ಚಂದ್ರ ಬಾಬು ತಂಡ ಇದ್ದಾರೆ.

ಪೆರಿಯ, ಚೀಮೇನಿ ಗೋದಾಮುಗಳಲ್ಲಿ ತೆಗೆದಿರಿಸಿರುವ ಎಂಡೋಸಲ್ಫಾನ್ ಕೀಟನಾಶಕವನ್ನು ನಿನ್ನೆ ತಂಡ ಪರಿಶೀಲಿಸಿದೆ. ಇಲ್ಲಿಂದ ಸ್ಯಾಂಪಲ್ ಸಂಗ್ರಹಿಸಲಾಗಿದೆ.

You cannot copy contents of this page