ಕಾಸರಗೋಡು: ಪೆರಿಯ ಕೇಂದ್ರ ಕೇರಳ ವಿ.ವಿಯಲ್ಲಿ ಮತ್ತೆ ಪೂಜೆ ವಿವಾದ ಉಂಟಾಗಿದೆ. ವಿವಿಯ ಹುಡುಗರ ಹಾಸ್ಟೆಲ್‌ಗೆ ಕೆನರ ಬ್ಯಾಂಕ್ ನೀಡಿದ ಬಸ್‌ನ ಕೀಲಿಕೈ ಹಸ್ತಾಂತರ ಕಾರ್ಯಕ್ರಮದ ಪೂರ್ವಭಾವಿಯಾಗಿ ವಾಹನದ ಪೂಜೆ ನಡೆಸಲಾಗಿದೆ. ವಿ.ವಿಯ ನೌಕರ ಪೂಜೆ ನಡೆಸಿರುವುದು.ವಿ.ವಿಯ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕವಾದ ಕಾರ್ಯಕ್ರಮಗಳನ್ನು ನಡೆಸಬಾರದೆಂಬ ಮಾನದಂಡವನ್ನು ಮೀರಿ ಪೂಜೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ವಿಶ್ವವಿದ್ಯಾನಿಲಯದ ಧಾರ್ಮಿಕ ಸೌಹಾರ್ದತೆಯನ್ನು ಹಾನಿಗೊಳಿಸಲಿರುವ ಪ್ರಜ್ಞಾಪೂರ್ವಕವಾದ ಯತ್ನದಂಗವಾಗಿ ಹೀಗೆ ಮಾಡಲಾಗಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ. ವೈಸ್ ಚಾನ್ಸಲರ್ ಪ್ರೊ. ಸಿದ್ದು ಪಿ. ಅಲ್ಗುರ್, ರಿಜಿಸ್ಟ್ರಾರ್‌ರ ಹೊಣೆ ವಹಿಸುವ ಪ್ರೊ. ವಿ.ಬಿ. ಸಮೀರ್ ಕುಮಾರ್, ಪರಿಕ್ಷಾ ಕಂಟ್ರೋಲರ್ ಡಾ. ಆರ್. ಜಯಪ್ರಕಾಶ್ ಮೊದಲಾದವರ ಉಪಸ್ಥಿತಿಯಲ್ಲಿ ಪೂಜೆ ನಡೆದಿದೆ. ಈ ಮೊದಲು ಹಾಸ್ಟೆಲ್ ಕಟ್ಟಡ, ಲೈಬ್ರೆರಿ ಎಂಬೆಡೆಗಳಲ್ಲಿ ಇದೇ ರೀತಿಯ ಪೂಜೆಗಳನ್ನು ನಡೆಸಿರುವುದು ವಿವಾದಗಳಿಗೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದೆ.






