ಸೋಲಾರ್ ಡ್ರಯರ್‌ನಲ್ಲಿರಿಸಿದ್ದ 235 ಕಿಲೋ ಅಡಿಕೆ ಕಳವು: ಮೂವರು ಆರೋಪಿಗಳ ಬಂಧನ

ಬದಿಯಡ್ಕ: ಸೋಲಾರ್ ಡ್ರಯರ್‌ನಲ್ಲಿ ಇರಿಸಿದ್ದ 235 ಕಿಲೋ ಅಡಿಕೆ ಕಳವುಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಂಗಾರು ಕೈಪಂಗಳ  ನಿವಾಸಿ  ಕೆ. ಗಣೇಶ್ (29), ಗುತ್ಯಡ್ಕ ನಿವಾಸಿ ಶಿಶಿರ್ ಕುಮಾರ್ (19), ಸತೀಶ್ ಕುಮಾರ್ (31) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಪೊಲೀಸರು ನ್ಯಾಯಾಲ ಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ಆರೋಪಿಗಳಿಗೆ ರಿಮಾಂಡ್ ವಿಧಿಸಲಾಗಿದೆ.

ಏತಡ್ಕ ನಿವಾಸಿ ಇಬ್ರಾಹಿಂ ಎಂಬವರ ಮನೆ ಸಮೀಪದ ಸೋಲಾರ್ ಡ್ರಯರ್‌ನಲ್ಲಿ ಇರಿಸಿದ್ದ ಅಡಿಕೆಯನ್ನು ಜುಲೈ 2 ಹಾಗೂ 3ರಂದು ಸಂಜೆ ೫ ಗಂಟೆ ಮಧ್ಯೆ ಕಳವುನಡೆಸಲಾಗಿತ್ತು. ಈ ಬಗ್ಗೆ ಇಬ್ರಾಹಿಂ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದರು. ಬಳಿಕ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಗಳಾದ ಮೂರು ಮಂದಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬದಿಯಡ್ಕ ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣ  ಆರ್.ಪಿ ಅವರ ನೇತೃತ್ವದಲ್ಲಿ ಎಸ್‌ಐ ರೂಪೇಶ್, ಎಎಸ್‌ಐ ಪ್ರಸಾದ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಗೋಕುಲ್, ಶ್ರೀನೇಶ್ ಎಂಬಿವರು  ಆರೋಪಿ ಗಳನ್ನು ಬಂಧಿಸಿದ್ದಾರೆ.  ಇತ್ತೀಚೆಗೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಅಡಿಕೆ ಕಳವು ನಡೆದಿದೆ. ಅದರಲ್ಲೂ ಇದೀಗ ಸೆರೆಗೀಡಾದ ಆರೋಪಿಗಳು ಭಾಗಿಯಾಗಿರಬಹುದೇ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಆರೋಪಿಗಳನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page