ಕೊಲ್ಲೂರು ಮುಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್‌ರಿಗೆ ಸ್ವಾಗತ

ಕೊಲ್ಲೂರು: ಮುಖ್ಯಮಂತ್ರಿ ಯಾದ ಬಳಿಕ ಪ್ರಥಮವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ವಿ.ಡಿ. ಸತೀಶನ್ ತಲುಪಿದ್ದಾರೆ. ಕ್ಷೇತ್ರ ಟ್ರಸ್ಟಿ ಸದಸ್ಯರು ಸಹಿತವಿರುವವರು ಇವರಿಗೆ ಪೂರ್ಣಕುಂಭ ಸ್ವಾಗತ ನೀಡಿದ್ದಾರೆ. ಕ್ಷೇತ್ರದಲ್ಲಿ ಪ್ರತ್ಯೇಕ ಪೂಜೆಗಳನ್ನು ವಿ.ಡಿ. ಸತೀಶನ್ ನೆರವೇರಿಸಿದರು. ಇಂದು ಬೆಳಿಗ್ಗೆ 6 ಗಂಟೆಗೆ ಇವರು ಕ್ಷೇತ್ರಕ್ಕೆ ತಲುಪಿದ್ದಾರೆ. ಚಂಡಿಕಾ ಹೋಮದಲ್ಲಿ ಪೂರ್ಣ ಸಮಯ ಮುಖ್ಯಮಂತ್ರಿ ಭಾಗವ ಹಿಸಿದ್ದು, ಆ ಬಳಿಕ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.

ಕ್ಷೇತ್ರ ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿನ್ನೆ ರಾತ್ರಿ 11 ಗಂಟೆಗೆ ಕೊಲ್ಲೂರಿಗೆ ಇವರು ತಲುಪಿದ್ದು, ಅಲ್ಲಿನ ಅತಿಥಿಗೃಹದಲ್ಲಿ ತಂಗಿದ್ದರು. ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಮುಂಚಿತವೂ ಇವರು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

You cannot copy contents of this page