ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರ ಮೃತ್ಯು

ಉಪ್ಪಳ: ಬಸ್-ಸ್ಕೂಟರ್ ಮಧ್ಯೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಓರ್ವ ಮೃತಪಟ್ಟಿದ್ದಾರೆ. ಸೋಂಕಾಲು ಕೊಡಂಗೆ ರಸ್ತೆಯ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ವ್ಯಾಪಾರಿ ಮೆಹಮೂದ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್ [20] ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೋರ್ವ ಸವಾರ ಉಪ್ಪಳ ಬಳಿಯ ಮಣಿಮುಂಡ ನಿವಾಸಿ ಮಂಗಲ್ಪಾಡಿ ಪಂಚಾಯತ್ ಸದಸ್ಯ ಮಹಮೂದ್ ಎಂಬವರ ಪುತ್ರ ಮೊಹಮ್ಮದ್ ಮಾಝಿನ್ [24] ಗಂಭೀರ ಗಾಯಗೊಂಡು ತೀವ್ರ ನಿಗಾ ವಿಭಾಗ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮೊನ್ನೆ ರಾತ್ರಿ ಇಬ್ಬರು ಸ್ಕೂಟರ್‌ನಲ್ಲಿ ಕುಂಬಳೆ ಭಾಗಕ್ಕೆ ಸಂಚರಿಸುವ ವೇಳೆ ನಾರಾಯಣ ಮಂಗಲದಲ್ಲಿ ಖಾಸಗಿ ಬಸ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ಉಂಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಇಬ್ರಾಹಿಂ ಖಲೀಲ್ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ ಮೆಹಮೂನ, ಸಹೋದರಿಯರಾದ ಸಲ್ಮಾ, ನಸೀರ, ಫಯರೋಸ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page