ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಮಾರ್ಚ್

ಉಪ್ಪಳ: ಮುಸ್ಲಿಂ ಲೀಗ್ ಆಡಳಿತದ ವೈಫಲ್ಯ ಹಾಗೂ ದುರಾಡಳಿತದ ವಿರುದ್ದ ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬೆಳಿಗ್ಗೆ ಮಾರ್ಚ್ ನಡೆಸಲಾಯಿತು. ಕೈಕಂಬದಿAದ ಹೊರಟ ಮಾರ್ಚ್ ಪಂಚಾಯತ್ ಕಚೇರಿ ತನಕ ನಡೆಯಿತು. ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಉದ್ಘಾಟಿಸಿದರು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ರಾಮಚಂದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುSಂಡರಾದ ಸುನಿಲ್ ಕುಮಾರ್ ಅನಂತಪುರ, ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್ ಕೆ ಪಿ, ಬಾಬು ಕುಬಣೂರು, ಜಯಂತಿ ಶೆಟ್ಟಿ, ಭರತ್ ರೈ, ಸೀತಾರಾಮ ಭಂಡಾರಿ,ರಘು ಸಿ, ಬಾಲಕೃಷ್ಣ ಆಂಬಾರ್,ಸ್ವಾಗತ್ ಕುಮಾರ್, ಹರಿನಾಥ ಭಂಡಾರಿ, ಸುರೇಶ್ ಮುಟ್ಟ, ಸುರೇಶ ಹೇರೂರ್, ಭಾಗೀರಥಿ ಇಚ್ಲಂಗೋಡು, ಅನಿಲ್ ಐಲ, ಗಣೇಶ್ ಕೆ.ಎನ್, ಪಂಚಾಯತ್ ಸದಸ್ಯರಾದ ಸುಧಾ. ವಿ.ವಿ, ರೇವತಿ ಕೆ, ಯುವಮೋರ್ಚಾದ ಕಿಶೋರ್ ಭಗವತಿ, ಉಣ್ಣಿ ಪ್ರತಾಪನಗರ ಮತ್ತು ಹಲವರು ಭಾಗವಹಿಸಿದರು. ಪಂಚಾಯತ್ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿ, ಅಮಿತ್ ಪರಂಕಿಲ ವಂದಿಸಿದರು.

RELATED NEWS

You cannot copy contents of this page