ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪ್ರತಿಭಾವಂತ ಯುವಜನರಿಗೆ ಸನ್ಮಾನ
ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯ ನಿನ್ನೆ ಹಮ್ಮಿಕೊಂಡ ವಿಶ್ವ ಯುವದಿನ ಕಾರ್ಯಕ್ರಮದಲ್ಲಿ ಕಾಸರಗೋಡು ಪರಿಸರದ ಪ್ರತಿಭಾವಂತ ಯುವಕರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ, ಯಕ್ಷಗಾನ ಕಲಾವಿದ ಕಿಶೋರ್ ಕೂಡ್ಲು ಅಧ್ಯಕ್ಷತೆ ವಹಿಸಿದರು. ಈಶ್ವರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಇದರ ಸಂಯೋಜಕಿ ಬಿ.ಕೆ. ವಿಜಯಲಕ್ಷ್ಮಿ ಪ್ರಧಾನ ಭಾಷಣ ಮಾಡಿದರು.
ರಾಷ್ಟ್ರಮಟ್ಟದಲ್ಲಿ ವಿಜೇತರಾದ ವೈಭವ್ ಕೂಡ್ಲು, ಕುಲದೀಪ್, ಶಿಯಾ, ಕೌಸ್ತುಬ್, ಸಾಜಿತಾ ಸುಜಿತ್, ಶರಣ್, ಅತರ್ವ ಮತ್ತು ರಾಜೇಶ್‌ರನ್ನು ಸನ್ಮಾನಿಸಲಾಯಿತು. ಬಿ.ಕೆ. ಮಂಗಳ ಗೌರವಿಸಿದರು. ಬಿ.ಕೆ. ಮಾಧವ ಸ್ವಾಗತಿಸಿ, ಬಿ.ಕೆ. ಅನುಷಾ ವಂದಿಸಿದರು.