ರಾಜ್ಯ ಮುಂಗಡಪತ್ರ: ಎನ್‌ಜಿಒ ಸಂಘ್‌ನಿಂದ ಪ್ರತಿಭಟನೆ 10ರಂದು

ಕಾಸರಗೋಡು: ರಾಜ್ಯ ಮುಂಗಡಪತ್ರ ಸರಕಾರಿ ನೌಕರರ ಮಟ್ಟಿಗೆ ನಿರಾಶಾಜನಕವೆಂದು ಕೇರಳ ಎನ್‌ಜಿಒ ಸಂಘ್ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ. ಬಾಕಿ ಉಳಿದಿರುವ 19 ಶೇ. ಕ್ಷಾಮಭತ್ತೆ ಮಂಜೂರು ಮಾಡದಿರುವುದು ೧೨ನೇ ವೇತನ ಪರಿಷ್ಕರಣೆಯ ಕ್ರಮ ಘೋಷಿಸದಿರುವುದು ನಿರಾಶೆ ತಂದಿದೆ. ಪಾಲುದಾರಿಕೆ ಪಿಂಚಣಿ ಹಿಂತೆಗೆಯುವುದಾಗಿ ಎಡರಂಗದ ಪ್ರಣಾಳಿಕೆಯ ಬಗ್ಗೆ ಮೌನ ವಹಿಸಿ ವಿತ್ತ ಸಚಿವ  ಮುಂಗಡಪತ್ರ ಮಂಡಿಸಿದ್ದಾರೆ. ಇದನ್ನು ಖಂಡಿಸಿ ಈ ತಿಂಗಳ 10ರಂದು ಪ್ರತಿಭಟನಾ ಮೆರವಣಿಗೆ ಸಿವಿಸ್ ಸ್ಟೇಶನ್ ಪರಿಸರದಲ್ಲಿ  ನಡೆಸಲು ಎನ್‌ಜಿಒ ಸಂಘ್ ತೀರ್ಮಾನಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ರಂಜಿತ್ ಕೆ ಅಧ್ಯಕ್ಷತೆ ವಹಿಸಿದರು. ಪಿ. ಪೀತಾಂಬರನ್, ರವಿಕುಮಾರ್.ಕೆ, ರವೀಂದ್ರನ್ ಎ ಸಹಿತ ಹಲವರು ಭಾಗವಹಿಸಿದರು.

You cannot copy contents of this page