ಚೆರುಗೋಳಿ ಶಾಲೆಯ ಶತಮಾನೋತ್ಸವ ಸಂಭ್ರಮ 22ರಂದು
ಮಂಗಲ್ಪಾಡಿ: ಚೆರುಗೋಳಿ ಪರಿ ಸರದಲ್ಲಿ ಕಳೆದ 100 ವರ್ಷಗಳಿಂದ ಅಕ್ಷರ ಜ್ಞಾನ ಧಾರೆ ಎರೆದ ಜಿ.ಎಚ್. ಡಬ್ಲೂ÷್ಯ.ಪಿ ಶಾಲೆ ಮಂಗಲ್ಪಾಡಿ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಸಂಭ್ರಮಾಚರಣೆ ಪೆs.22 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಸಂಜೆ 6ಗಂಟೆಗೆ ಶತಮಾನೋತ್ಸವ ಸಂಭ್ರಮ ಸಭೆಯಲ್ಲಿ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬಿನಾ ನೌಫಲ್ ಅಧ್ಯಕ್ಷತೆ ವಹಿಸುವರು. ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸುವರು. ಪಂ. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಚಯರ್‌ಪರ್ಸನ್ ಇರ್ಫಾನಾ ಇಕ್ಬಾಲ್, ಪಂ. ಸದಸ್ಯೆ ರೇವತಿ ಕಮಲಾಕ್ಷ, ಮಂಜೇಶ್ವರ ಬಿ.ಆರ್.ಸಿಯ ಜೋಯ್.ಜಿ, ಮಂಗಲ್ಪಾಡಿ ಶಾಲಾ ಎಸ್.ಎಂ.ಸಿ ಅಧ್ಯಕ್ಷ ಸೈದಲವಿ, ಅಬ್ದುಲ್ ರಹಿಮಾನ್ ಅಂಬಾರು, ಬಾಲಕೃಷ್ಣ ಅಂಬಾರು, ಸಾಧಿಕ್ ಚೆರುಗೋಳಿ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರೇಂ ಕುಮಾರ್ ಐಲ್, ಚೆರುಗೋಳಿ ಸದಾಶಿವ ಕಲಾವೃಂದದ ಅಧ್ಯಕ್ಷ ಸಮಂತ್ ಶೆಟ್ಟಿ, ಚೆರುಗೋಳಿ ಸೆವೆನ್‌ಸ್ಟಾರ್ ಕ್ಲಬ್ ಅಧ್ಯಕ್ಷ ನೌಫಲ್, ಹಳೆ ವಿದ್ಯಾರ್ಥಿ ಬಾಲಕೃಷ್ಣ.ಸಿ, ವಿಜಯ ಕುಮಾರ್ ಕೃಷ್ಣನಗರ, ಎಂ.ಪಿ.ಟಿ.ಎ ಅಧ್ಯಕ್ಷೆ ಸುಮಿತ, ಮುಖ್ಯೋಫಾಧ್ಯಾಯ ವಿಜಯ.ಸಿ.ಎಚ್, ಹಿರಿಯ ಅಧ್ಯಾಪಿಕೆ ಸರೋಜಿನಿ.ಸಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ, ಮಂಜೇಶ್ವರ ಸಹಾಯಕ ವಿದ್ಯಾಧಿಕಾರಿ ರಾಜಗೋಪಾಲ.ಕೆ, ಗೋಪಾಲ ಶೆಟ್ಟಿ, ಅಧ್ಯಾಪಿಕೆ ಜಯಂತಿ.ಎನ್, ಹಿರಿಯ ಕೃಷಿಕ ಸದಾಶಿವ ಬೀರಿಗುಡ್ಡೆ, ಉದ್ಯಮಿ ಹಮೀದ್ ಕುಂಞÂಹಾಜಿ ಚೆರುಗೋಳಿ, ಆಟೋ ಚಾಲಕ ಪುರುಷೆÆÃತ್ತಮ ಚೆರು ಗೋಳಿ ಇವರನ್ನು ಗೌರವಿಸಲಾಗು ವುದು. ಸಾಂಸ್ಕöÈತಿಕ ಕಾರ್ಯಕ್ರಮದಂ ಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೇ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಪ್ರದರ್ಶನಗೊಳ್ಳಲಿದೆ.