ಯುವಕ ಶೆಡ್ನಲ್ಲಿ ನೇಣು ಬಿಗಿದು ಮೃತ್ಯು
ಹೊಸದುರ್ಗ: ಯುವಕನನ್ನು ಮನೆ ಬಳಿಯ ಶೆಡ್ನಲ್ಲಿ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ತೈಕಡ ಪ್ಪುರಂ ಸೀರೋಡ್ ನಿವಾಸಿ ಮಹೇಂ ದ್ರನ್ (39) ಮೃತಪಟ್ಟ ಯುವಕ. ಕಾಂಕ್ರೀಟ್ ಕಾರ್ಮಿಕನಾಗಿದ್ದರು. ನೀಲೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಕೊಂಡೊ ಯ್ದಿದ್ದಾರೆ. ಮುನಂಬತ್ ಅಂಬು ಹಾಗೂ ಮಾಧವಿ ದಂಪತಿ ಪುತ್ರನಾದ ಮೃತರು ಸಹೋದ ರರಾದ ಸುರೇಂದ್ರನ್, ರವೀಂದ್ರನ್, ಸಹೋದರಿಯರಾದ ಅನಿತಾ, ಪ್ರೇಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.