ಜೋಯಿಂಟ್ ಕೌನ್ಸಿಲ್ ಮಂಜೇಶ್ವರ ವಲಯ ಸಮ್ಮೇಳನ
ಮಂಜೇಶ್ವರ: ಜೋಯಿಂಟ್ ಕೌನ್ಸಿಲ್ ಜಿಲ್ಲಾ ಸಮ್ಮೇಳನದಂಗವಾಗಿ ಮಂಜೇಶ್ವರ ವಲಯ ಸಮ್ಮೇಳನ ಜರಗಿತು. ಮಂಜೇಶ್ವರದ ಟಿ.ವಿ. ಥೋಮಸ್ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮವನ್ನು ಜೋಯಿಂಟ್ ಕೌನ್ಸಿಲ್ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎ. ಗ್ರೇಶಿಯಸ್ ಉದ್ಘಾಟಿಸಿದರು. ರಾಜ್ಯದ ಸರಕಾರಿ ನೌಕರರು, ಅಧ್ಯಾಪಕರ ೧೨ನೇ ವೇತನ ಪರಿಷ್ಕರಣೆ ಆಯೋಗ ರೂಪೀಕರಿಸಲು ಕ್ರಮ ಕೈಗೊಳ್ಳಬೇಕೆಂದು ವಲಯ ಸಮ್ಮೇಳನದಲ್ಲಿ ಆಗ್ರಹಿಸಲಾ ಯಿತು. ಅಧ್ಯಕ್ಷೆ ಸುಷ್ಮಾ ರಾವ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರಿಯಾಸ್ ಹುಸೈನ್ ಸ್ವಾಗತಿಸಿದರು. ಜೋಯಿಂಟ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಇ. ಮನೋಜ್ ಕುಮಾರ್ ಚಟುವ ಟಿಕಾ ವರದಿ ಮಂಡಿಸಿದರು. ರಾಜ್ಯ ಉಪಾಧ್ಯಕ್ಷ ನರೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಿಜುರಾಜ್ ಸಿ.ಕೆ, ಜಿಲ್ಲಾ ಉಪಾಧ್ಯಕ್ಷ ಎ.ವಿ. ರಾಧಾಕೃಷ್ಣನ್, ಸುರೇಶ್ ಬಾಬು, ಪ್ರದೀಪ್ ಕುಮಾರ್, ದಿನೇಶ್, ಆಮಿನ ಮಾತನಾಡಿದರು.
ನೂತನ ಸಮಿತಿಗೆ ಅಧ್ಯಕ್ಷೆಯಾಗಿ ಸುಷ್ಮಾ ರಾವ್, ಕಾರ್ಯದರ್ಶಿಯಾಗಿ ಸಿ.ಕೆ. ಮೋಹನ್ ಕುಮಾರ್, ಕೋಶಾಧಿಕಾರಿಯಾಗಿ ಸುಧೀಶ್, ಜೊತೆ ಕಾರ್ಯದರ್ಶಿಯಾಗಿ ಸುಗುಣನ್, ಉಪಾಧ್ಯಕ್ಷರಾಗಿ ಸತೀಶ್ ನಾಯ್ಕ್, ಮಹಿಳಾ ಸಮಿತಿ ಕಾರ್ಯದರ್ಶಿಯಾಗಿ ದೀಪಾ ಪಿ, ಅಧ್ಯಕ್ಷೆಯಾಗಿ ರೇಣುಕಾ ಪಿ. ಆಯ್ಕೆಯಾದರು. ಇಬ್ರಾಹಿಂ ವಂದಿಸಿದರು.