ಕೂಡ್ಲು: ಪುರಂಬೋಕ್ ಹಕ್ಕುಪತ್ರ ಲಭಿಸಿದವರ ಭೂಮಿ ಸರ್ವೆ

ಕೂಡ್ಲು: ಪುರಂಬೋಕ್ನಲ್ಲಿ ಪಟ್ಟಾ ಲಭಿಸಿ ತೆರಿಗೆ ಪಾವತಿಸಲು ಸಾಧ್ಯವಾಗದೆ ಕೈವಶವಿರುವ ಭೂಮಿ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಕಾಣುವುದಕ್ಕಾಗಿ ಭೂಮಿಯನ್ನು ಅಳತೆ ಮಾಡಿ ರೀ ಸರ್ವೆ ದಾಖಲೆ ಸಿದ್ಧಪಡಿಸಲು ಆರಂಭಿಸಿದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಉದ್ಘಾಟಿಸಿದರು. ಈ ಮೊದಲು ರೀ ಸರ್ವೆ ಪೂರ್ತಿಗೊಳಿಸಿ ಕೂಡ್ಲು ವಿಲ್ಲೇಜ್ನಲ್ಲಿ ಸಮುದ್ರ ಪುರಂಬೋಕ್ನಲ್ಲಿ ಹಕ್ಕುಪತ್ರ ನೀಡಿದ 394, 395, 396, 397 ಎಂಬೀ ಸರ್ವೆ ನಂಬ್ರಗಳ ಕೈವಶವಿರುವ ಭೂಮಿಯನ್ನು ರೀಸರ್ವೆ ನಡೆಸಿ ರೆವೆನ್ಯೂ ದಾಖಲೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಸರ್ವೆ ಕಾರ್ಯ ಮುಂದಿನ ವಾರ ಆರಂಭಗೊಳ್ಳುವುದು. ಈ ಸರ್ವೆ ನಂಬ್ರಗಳಲ್ಲಿ ಒಳಗೊಂಡ ಭೂಮಾಲಕರು ಕೈವಶವಿರುವ ದಾಖಲೆಗಳು, ಹಕ್ಕು ಪತ್ರಗಳನ್ನು ಹಾಜರುಪಡಿಸಿ ಕೈವಶ ಗಡಿ ತೋರಿಸಿಕೊಡಲು ಸಿದ್ಧರಾಗಬೇಕೆಂದು ರೀಸರ್ವೆ ಅಸಿಸ್ಟೆಂಟ್ ಡೈರೆಕ್ಟರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page