ಕುಂಬಳೆಯಲ್ಲಿ ಟೋಲ್ ಬೂತ್: ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ನೇತೃತ್ವದಲ್ಲಿ ಸಂಸದರೊಂದಿಗೆ ಚರ್ಚೆ

ಕುಂಬಳೆ: ತಲಪ್ಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಂಗವಾಗಿ ಕುಂಬಳೆಯಲ್ಲಿ ಟೋಲ್ ಬೂತ್ ಸ್ಥಾಪಿಸಲಿರುವ ಯತ್ನದ ವಿರುದ್ಧ ಇಂದು ಕುಂಬಳೆಯಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ ಚಳವಳಿ ಘೋಷಣೆ ನಡೆಯಲಿರುವಂತೆಯೇ ಕ್ರಿಯಾ ಸಮಿತಿ ಅಧ್ಯಕ್ಷ, ಶಾಸಕ ಎಕೆಎಂ ಅಶ್ರಫ್‌ರ ನಿರ್ದೇಶ ಪ್ರಕಾರ ಪ್ರಸ್ತುತದ ಸ್ಥಿತಿಗತಿಗಳ ಕುರಿತು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಅವರ ನೇತೃತ್ವದಲ್ಲಿ ನೇತಾರರು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಅಥೋರಿಟಿ ಕೇರಳ ರೀಜಿನಲ್ ಆಫೀಸರ್ ಬಿ.ಎಲ್. ಮೀಣ ಅವರನ್ನು ಸಂಸದ ಫೋನ್‌ನಲ್ಲಿ ಸಂಪರ್ಕಿಸಿ ಜನರಿಗೆ ಉಂಟಾಗಲಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಪ್ರಸ್ತುತ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತಲಪ್ಪಾಡಿಯಲ್ಲಿ ಟೋಲ್ ಬೂತ್ ಜ್ಯಾರಿಯಲ್ಲಿರುವಂತೆಯೇ ೬೦ ಕಿ.ಮೀ. ಎಂಬ ಮಾನದಂಡವನ್ನು ಲೆಕ್ಕಿಸಿ ೨೦ ಕಿ.ಮೀ. ಮಾತ್ರ ಅಂತರದಲ್ಲಿ ಮತ್ತೊಂದು ಟೋಲ್ ಬೂತ್ ಸ್ಥಾಪಿಸುವುದನ್ನು ನ್ಯಾಯೀಕರಿಸಲಾಗದೆಂದು ಸಂಸದ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯ ಕೊನೆಯ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಟೋಲ್ ಸಂಗ್ರ ಹಿಸಲು ಯತ್ನ ಆರಂಭಿಸಲಾಗಿದೆ ಯೆಂದೂ ಹೊಳೆಗೆ ಹೊಂದಿಕೊಂಡಿ ರುವ ಅಪಾಯಕಾರಿ ಸ್ಥಳದಲ್ಲಿ ಟೋಲ್ ಬೂತ್ ಸ್ಥಾಪಿಸುವುದು ಭಾರೀ ಸಾರಿಗೆ ಅಡಚಣೆಗಳಿಗೆ ಹಾಗೂ ಅಪಘಾತಗಳಿಗೆ ಕಾರಣವಾಗಲಿದೆ ಯೆಂದು ಸಂಸದ ಅವರೊಂದಿಗೆ ತಿಳಿಸಿದ್ದಾರೆ.  ದೆಹಲಿಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೆಟಿಯಾಗಿ ಅಗತ್ಯದ ಕ್ರಮಗಳನ್ನು ಕೈಗೊಳ್ಳುವು ದಾಗಿಯೂ ಸಂಸದ ತಿಳಿಸಿದರು. ಲೋಕನಾಥ ಶೆಟ್ಟಿ, ಬಿ.ಎನ್. ಮುಹಮ್ಮದ್ ಅಲಿ, ಕೆ.ವಿ.ಯೂಸಫ್ ಎಂಬಿವರು ನಿಯೋಗದಲ್ಲಿದ್ದರು.

You cannot copy contents of this page