ಎಂಡಿಎಂಎ ಸಹಿತ ಓರ್ವ ಸೆರೆ: ಬೈಕ್ ವಶ

ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ಯಲ್ಲಿ 4.09 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚೆರ್ವತ್ತೂರು ಕೈದಕ್ಕಾಡ್ ಮಸೀದಿ ಪರಿಸರ  ನಿವಾಸಿ  ಇಲ್ಯಾಸ್ ಅಬೂಬಕರ್ (24) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಈತ ಮಾರಾಟಕ್ಕಾಗಿ ಈ ಮಾಲನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.  ಬೈಕ್‌ನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರ ನಿರ್ದೇಶ ಪ್ರಕಾರ ಎಸ್‌ಐ ರವೀಂದ್ರನ್, ಸಿಪಿಒಗಳಾದ ಸನಲ್, ಗುರುರಾಜ್, ಉಣ್ಣಿಕೃಷ್ಣನ್, ಡಿವೈಎಸ್ಪಿ ಸ್ಕ್ವಾಡ್ ಸದಸ್ಯರುಗಳಾದ  ಎಸ್.ಐ. ನಾರಾಯಣನ್, ಎಸ್‌ಸಿಪಿ ಒಗಳಾದ ರಾಜೇಶ್, ದೀಪಕ್ ಮತ್ತು ಸಜೀಶ್ ಎಂಬಿವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.

RELATED NEWS

You cannot copy contents of this page