ಅಪಘಾತ: ಒಂದೇ ಕುಟುಂಬದ 9 ಮಂದಿ ಸಾವು
ನವದೆಹಲಿ: ಮಧ್ಯಪ್ರದೇಶದ ದುಬೂವ ಜಿಲ್ಲೆಯ ಮೇಘ ನಗರದಲ್ಲಿ ವ್ಯಾನ್‌ಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಸಂಜೇಲಿ ರೈಲ್ವೇ ಕ್ರಾಸಿಂಗ್ ನಲ್ಲಿರುವ ಮೇಲ್ಸೇತುವೆ ದಾಟುವಾಗ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ವ್ಯಾನ್‌ಗೆ ಢಿಕ್ಕಿ ಹೊಡೆದಿದೆ. ವ್ಯಾನ್‌ನೊಳಗಿದ್ದ ೯ ಮಂದಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿ ದ್ದಾರೆ. ಇಬ್ಬರನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.