ಎಂಡಿಎಂಎ ಸಹಿತ ಓರ್ವ ಸೆರೆ
ಉಪ್ಪಳ: ಮಾದಕವಸ್ತು ಕೈವಶವಿರಿಸಿಕೊಂಡ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಪರ್ವೀನ್ ಮಂಜಿಲ್ನ ಯಾಸಿನ್ ಇಮ್ರಾಸ್ ಕೆ.ಎಂ(36) ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಕೈಯಿಂದ 0.4 ಗ್ರಾಂ ಎಂಡಿಎಂಎ ವಶ ಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ ಕುಂಜತ್ತೂರು ಪೇಟೆಯಲ್ಲಿ ಎಸ್ಐ ರತೀಶ್ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಯಾಸಿನ್ ಇಮ್ರಾಸ್ ನನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.