ಕುಂಬಳೆಯಲ್ಲಿ ಗಾಳಿಗೆ ಹಾರಿಹೋಗಿ ರಸ್ತೆಯಲ್ಲಿ ಬಿದ್ದ ಗೂಡಂಗಡಿ, ತ್ಯಾಜ್ಯ ಪೆಟ್ಟಿಗೆ
ಕುಂಬಳೆ: ನಿನ್ನೆ ರಾತ್ರಿ 12.30ರ ವೇಳೆ ಬೀಸಿದ ಬಲವಾದ ಗಾಳಿಗೆ ಸಿಲುಕಿ ಕುಂಬಳೆಯಲ್ಲಿ ಗೂಡಂಗಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪೆಟ್ಟಿಗೆ ಹಾರಿ ಹೋಗಿ ರಸ್ತೆಗೆ ಬಿದ್ದ ಘಟನೆ ನಡೆದಿದೆ. ಬದಿಯಡ್ಕ- ಕುಂಬಳೆ ಕೆಎಸ್ ಟಿಪಿ ರಸ್ತೆಯಲ್ಲಿ ಕುಂಬಳೆ ಪೆಟ್ರೋಲ್ ಪಂಪ್ ಸಮೀಪ ಘಟನೆ ನಡೆದಿದೆ. ಮೊಯ್ದು ಎಂಬವರ ಗೂಡಂಗಡಿ ಹಾಗೂ ಹಸಿರು ಕ್ರಿಯಾ ಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಇರಿಸಲು ಕಬ್ಬಿಣದ ಸರಳು ಬಳಸಿ ನಿರ್ಮಿಸಿದ ಪೆಟ್ಟಿಗೆ ರಸ್ತೆ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೂಡಲೇ ಪೊಲೀಸ್ ಹಾಗೂ ಅಗ್ನಿಶಾಮಕದಳ ತಲುಪಿ ಗೂಡಂಗಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಪೆಟ್ಟಿಗೆಯನ್ನು ರಸ್ತೆಯಿಂದ ತೆರವುಗೊಳಿಸಿದರು.