ಬಿ.ಎಂ.ಎಸ್ ಮೀಂಜ ಪಂಚಾಯತ್ ಸಮಿತಿಯಿಂದ ಪಂಚಾಯತ್ ಕಚೇರಿ ಧರಣಿ

ಮಂಜೇಶ್ವರ: ಕಳೆದ ಕೆಲವು ತಿಂಗಳಿನಿAದ ಕಾರ್ಮಿಕರಿಗೆ ಪಿಂಚಣಿ ಹಾಗೂ ಇತರ ಯಾವುದೇ ಕ್ಷೇಮನಿಧಿ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಅವಗಣಿಸುತ್ತಿರುವ ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಬಿ.ಎಂ.ಎಸ್ ಮಿಂಜ ಪಂಚಾಯತ್ ಸಮಿತಿ ವತಿಯಿಂದ ಮಿಂಜ ಪಂಚಾಯತ್ ಆಫೀಸ್ ಧರಣಿ ನಡೆಸಲಾಯಿತು. ಸಮಿತಿ ಅಧ್ಯಕ್ಷÀ ರವಿಚಂದ್ರ ಶೆಟ್ಟಿ ಪದೆಂಜಿ ಬೈಲ್ ಅಧ್ಯಕ್ಷತೆ ವಹಿಸಿದ್ದು, ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ. ಉದ್ಘಾಟಿಸಿದರು. ನಿತ್ಯೋಪಯೋಗಿ ಸಾವiಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಿಸಿ ಬಡ ಜನರನ್ನು ಉಪವಾಸಕ್ಕೆ ತಳ್ಳುವ ಸರಕಾರದ ಕ್ರಮವನ್ನು ಖಂಡಿಸಿ ಅವರು ಮಾತನಾಡಿದರು. ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ಯಶವಂತಿ ಬೆಜ್ಜ, ವಲಯ ಅಧ್ಯಕ್ಷ ರವಿ ಎಂ ಕೆ. ಕೊಳ್ಯೂರು ಶು¨Àsಕೋರಿದರು. ಪದಾಧಿಕಾರಿಗಳಾದ ಬಾಲಕೃಷ್ಣ ಬಟ್ಟಿಪದವು, ಕೃಷ್ಣ ಬೆಜ್ಜ, ಮನೋಜ್ ಬಟ್ಟಿಪದವು, ನೇತೃತ್ವ ವಹಿಸಿದರು. ಗೋಪಿನಾಥ್ ಮೊರತ್ತನೆ ಸ್ವಾಗತಿಸಿ, ರಾಮಚಂದ್ರ ಬಟ್ಟಿಪದವು ವಂದಿಸಿದರು.

RELATED NEWS

You cannot copy contents of this page