ನಲ್ಕ ಶಾಲೆಗೆ ನೂತನ ಶೌಚಾಲಯ ಹಸ್ತಾಂತರ
ಪೆರ್ಲ: ವಿವಿಧ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿ ವೃದ್ಧಿಗೆ ಪಂಚಾಯತ್ ಮಹತ್ವ ನೀಡು ತ್ತಿದೆ ಎಂದು ಎಣ್ಮ ಕಜೆ ಪಂಚಾ ಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ನುಡಿದರು. ನಲ್ಕದ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಗೆ ಎಣ್ಮಕಜೆ ಪಂಚಾ ಯತ್ ವತಿಯಿಂದ ನಿರ್ಮಿಸಿದ ಶೌಚಾಲಯಗಳ ಹಸ್ತಾಂತರ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪಂಚಾಯತ್ ಸದಸ್ಯೆ ಆಶಾಲತಾ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಮುಖ್ಯ ಅತಿಥಿಯÁಗಿ ಭಾಗವಹಿಸಿದರು. ಕುಂಬಳೆ ರಿಸೋರ್ಸ್ ಕೋ ಆರ್ಡಿನೇಟರ್ ಸುರೇಶ್ ಶುಭಾಶಯ ಕೋರಿದರು.ಶಾಲಾ ಪ್ರಬಂಧಕ ಸತ್ಯನಾರಾಯಣ ಭಟ್ ವರ್ಮುಡಿ ಪಂಚಾಯತ್ ಅಧ್ಯಕ್ಷರನ್ನು ಗೌರವಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ್ ವರ್ಮುಡಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಪತಿ ಸ್ವಾಗತಿಸಿ, ನಳಿನಿ ವಂದಿಸಿದರು. ಶಿಕ್ಷಕಿ ಉಷಾದೇವಿ ನಿರೂಪಿಸಿದರು.