ಸೇತುವೆಯಲ್ಲಿ ಕಾರು ಉಪೇಕ್ಷಿಸಿ ನಾಪತ್ತೆಯಾಗಿದ್ದ ವ್ಯಾಪಾರಿಯ ಮೃತದೇಹ ಪತ್ತೆ

ಕಾಸರಗೋಡು: ಚಂದ್ರಗಿರಿ ಸೇತುವೆ ಮೇಲೆ ಕಾರು ಉಪೇ ಕ್ಷಿಸಿದ ಬಳಿಕ ನಾಪತ್ತೆಯಾಗಿದ್ದ ವ್ಯಾಪಾರಿಯ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಶಿರಿಬಾಗಿಲು ರಹ್ಮತ್‌ನಗರದ ನಿವಾಸಿಯೂ, ನಗರದಲ್ಲಿ ಹೋಟೆಲ್ ಮಾಲಕನಾದ ಹಸೈನಾರ್ (೪೬) ಎಂಬವರ ಮೃತದೇಹ ಇಂದು ಬೆಳಿಗ್ಗೆ ತಳಂಗರೆ ಹೊಸ ಹಾರ್ಬರ್ ಬಳಿ ಪತ್ತೆಯಾಗಿದೆ. ಮೃತದೇಹ ವನ್ನು ಮರಣೋತ್ತರ ಪರೀಕ್ಷೆ ಗಾಗಿ ಜನರಲ್ ಆಸ್ಪತ್ರೆಗೆ ತಲುಪಿ ಸಲಾಗಿದೆ. ಹಸೈನಾರ್ ಮೊನ್ನೆ ರಾತ್ರಿಯಿಂದ ನಾಪತ್ತೆಯಾಗಿ ದ್ದಾರೆಂದು ಹೇಳಲಾಗುತ್ತಿದೆ. ನಿನ್ನೆ ಮುಂಜಾನೆ ಅವರ  ಕಾರು ಹಾಗೂ ಚಪ್ಪಲಿ ಚಂದ್ರಗಿರಿ ಸೇತುವೆ ಬಳಿ ಉಪೇಕ್ಷಿತ ಸ್ಥಿತಿಯಲ್ಲಿ ಕಂಡುಬಂದಿತ್ತು.  ಅಲ್ಲದೆ ಓರ್ವ ವ್ಯಕ್ತಿ ಹೊಳೆಗೆ ಹಾರಿರುವುದನ್ನು ಕಂಡಿರುವುದಾಗಿ ಆ ಮೂಲಕ ಸಂಚರಿಸಿದವರು ಪರಿಸರ ನಿವಾಸಿಗಳಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಠಾಣೆ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ  ಹೋಂಡಾ ಸಿಟಿ ಕಾರು ಹಾಗೂ ಒಂದು ಜೋಡಿ ಚಪ್ಪಲಿ ಸೇತುವೆ ಬಳಿ ಪತ್ತೆಯಾಗಿತ್ತು.

ಇವುಗಳು ಹಸೈನಾರ್ ರದ್ದೆಂದು ಬಳಿಕ ದೃಢೀಕರಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಳೆಯಲ್ಲಿ ಅವರಿಗಾಗಿ ಶೋಧ ನಡೆಸಲಾಗಿತ್ತು.

RELATED NEWS

You cannot copy contents of this page