ಕಾರು ಢಿಕ್ಕಿ ಹೊಡೆದು ಟ್ಯಾಕ್ಸಿ ಚಾಲಕನಿಗೆ ಗಾಯ

ಉಪ್ಪಳ: ರಸ್ತೆ ದಾಟುತ್ತಿದ್ದ ಟ್ಯಾಕ್ಸಿ ಚಾಲಕನಿಗೆ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ನಡೆದಿದೆ. ಬೇಕೂರು ಒಬರ್ಲೆ ನಿವಾಸಿ ಪುತ್ತು ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ೭.೩೦ರ ವೇಳೆ ಉಪ್ಪಳ ಬಳಿಯ ಮಣ್ಣಂಗುಳಿಯಲ್ಲಿ ಘಟನೆ ನಡೆದಿದೆ. ಪುತ್ತು ತನ್ನ ಟ್ಯಾಕ್ಸಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ರಸ್ತೆ ದಾಟುತ್ತಿದ್ದಾಗ ಕೈಕಂಬ ಭಾಗದಿಂದ ಬಂದ ಕಾರು ಅವರಿಗೆ  ಢಿಕ್ಕಿ ಹೊಡೆದಿದೆ. ಅದೇ ಕಾರು ಬಳಿಕ ಬೈಕೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ.

You cannot copy contents of this page