ನಾಪತ್ತೆಯಾಗಿದ್ದ ಬಾಲಕಿ ಜೀಪು ಢಿಕ್ಕಿ ಹೊಡೆದು ಮೃತ್ಯು
ಹೊಸದುರ್ಗ: ಮನೆ ಯಿಂದ ನಾಪತ್ತೆಯಾಗಿದ್ದ ಬಾಲಕಿ ಜೀಪು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.
ಕೊಡಕ್ಕಾಡ್ ಬಳಿಯ ವೆಳ್ಳಚ್ಚಾಲ್ ಶಾಂತಿ ನಿಲಯದ ಸುರೇಶ್-ಚಿತ್ರಾ ದಂಪತಿಯ ಪುತ್ರಿ ಆದಿಯ ಸುರೇಶ್ (೧೭) ಮೃತಪಟ್ಟ ಬಾಲಕಿ. ನಿನ್ನೆ ರಾತ್ರಿ ೮.೩೦ರ ಬಳಿಕ ಬಾಲಕಿ ಮನೆಯಿಂದ ನಾಪತ್ತೆಯಾಗಿ ದ್ದಳು. ಆಕೆಗಾಗಿ ಹುಡುಕಾಟ ನಡೆಸುತ್ತಿರುವಂತೆ ಪಾಲಕುನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀಪು ಢಿಕ್ಕಿ ಹೊಡೆದು ಗಾಯಗೊಂಡಿರುವುದಾಗಿಯೂ ಇದರಿಂದ ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿ ಸಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಬಾಲಕಿ ಗಂಭೀರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಬಳಿಕ ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಮಧ್ಯೆ ರಾತ್ರಿ ವೇಳೆ ಬಾಲಕಿ ಮೃತಪಟ್ಟಳು.