ಕಡನ್ನಪಳ್ಳಿ, ಗಣೇಶ್ ಕುಮಾರ್ ಸಚಿವರಾಗಿ ಪ್ರಮಾಣ ವಚನ ೨೯ರಂದು
ಕಾಸರಗೋಡು: ರಾಜ್ಯದ ಅತೀ ಹಿರಿಯ ಶಾಸಕ ಕಾಂಗ್ರೆಸ್ (ಎಸ್)ನ ರಾಜ್ಯ ಅಧ್ಯಕ್ಷರೂ ಆಗಿರುವ ಕಡನ್ನಪಳ್ಳಿ ರಾಮಚಂದ್ರನ್ ಮತ್ತು ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಕೆ.ಬಿ. ಗಣೇಶ್ ಕುಮಾರ್‌ರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ತೀರ್ಮಾನಕ್ಕೆ ಎಡರಂಗ ರಾಜ್ಯ ಸಮಿತಿ ಬಂದಿದೆ ಎಂದು ಎಡರಂಗದ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್ ತಿಳಿಸಿದ್ದಾರೆ.
ಈ ತಿಂಗಳ ೨೯ರಂದು ಸಂಜೆ ರಾಜ್‌ಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ರಿಂದ ಕಡನ್ನಪಳ್ಳಿ ರಾಮಚಂದ್ರನ್ ಮತ್ತು ಗಣೇಶ್ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವರು. ಇದೇ ಸಂದರ್ಭದಲ್ಲಿ ಸಚಿವರಾಗಿ ಎರಡೂವರೆ ವರ್ಷ ಪೂರೈಸಿದ ಆಂಟನಿರಾಜು ಮತ್ತು ಅಹಮ್ಮದ್ ದೇವರ್‌ಕೋವಿಲ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ.