ಶಬರಿಮಲೆ ಚಿನ್ನ ಕಳವು ಪ್ರಕರಣ: ದೇವಸ್ವಂ ಸಚಿವರ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ

ಮಧೂರು: ಮಧೂರು ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಶಬರಿಮಲೆ ಚಿನ್ನ ಕಳ್ಳತನ ವಿಷಯಕ್ಕೆ ಸಂಬಂಧಿಸಿ ಪಂಜಿನ ಮೆರವಣಿಗೆ ಪ್ರತಿಭಟನೆ ನಡೆಸಲಾಯಿತು. ವಿಶ್ವದಾದ್ಯಂತವಿರುವ ಅಯ್ಯಪ್ಪ ಭಕ್ತರನ್ನು ಹಾಗೂ ಶಬರಿಮಲೆ ಕ್ಷೇತ್ರವನ್ನು ಅವಹೇಳನಗೈಯ್ಯುವ ರೀತಿಯಲ್ಲೇ ಸರಕಾರ, ದೇವಸ್ವಂ ಇಲಾಖೆಯ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಈ ವಿಷಯದಲ್ಲಿ ಮುಜರಾಯಿ ಸಚಿವ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆಯನ್ನು ಮತ್ಸ್ಯ ಕಾರ್ಮಿಕ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಂಗಾಧರನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಮುಹಮ್ಮದ್ ವಟ್ಟಯಕ್ಕಾಡ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವನ್ ನಂಬ್ಯಾರ್, ಅರ್ಜುನನ್ ತಾಯಲಂಗಾಡಿ, ದೇವದಾಸನ್, ಉಷಾ ಎಸ್, ಕುಸುಮ ಚೇನಕ್ಕೋಡ್, ಧರ್ಮಧೀರ,ಸಂತೋಷ್ ಕ್ರಾಸ್ತಾ, ಸುಜಾತ ಕೆ.ವಿ, ಅಬೂಬಕರ್ ಪಟ್ಲ, ವಿದ್ಯಾ  ಪಿ, ನಾಸಿರ್ ಮೀಪುಗುರಿ ಮಾತನಾಡಿದರು.

You cannot copy contents of this page