ಸಿಪಿಐ ಜಿಲ್ಲಾ ಸಹಾಯಕ ಕಾರ್ಯದರ್ಶಿಗಳಾಗಿ ವಿ. ರಾಜನ್, ಎಂ. ಅಸಿನಾರ್ ಆಯ್ಕೆ

ಕಾಸರಗೋಡು:ಸಿಪಿಐ ಜಿಲ್ಲಾ ಕೌನ್ಸಿಲ್ ಸಭೆಯಲ್ಲಿ ಸಿಪಿಐ ಜಿಲ್ಲಾ ಸಹಾಯಕ ಕಾರ್ಯದರ್ಶಿಗಳಾಗಿ ವಿ ರಾಜನ್ ಮತ್ತು ಎಂ. ಅಸಿನಾರ್ ಅವರನ್ನು ಆಯ್ಕೆ ಮಾಡಲಾಯಿತು. ಟಿ ಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಹಾಯಕ ಕಾರ್ಯದರ್ಶಿಗಳು ಮತ್ತು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಎಕ್ಸಿಕ್ಯೂಟಿವ್ ಸದಸ್ಯರಾಗಿ ಸಿ.ಪಿ.ಬಾಬು, ವಿ.ರಾಜನ್, ಎಂ.ಅಸಿನಾರ್, ಕೆ.ವಿ.ಕೃಷ್ಣನ್, ಬಂಗಳA ಕುಂಞÂಕೃಷ್ಣನ್, ಕೆ.ಎಸ್. ಕುರಿಯಾಕೋಸ್, ಎಂ.ಕುಮಾರನ್, ಮಾಜಿ ಶಾಸಕ ವಿ.ಸುರೇಶ್ ಬಾಬು, ಪಿ.ಭಾರ್ಗವಿ, ಪಿ.ವಿಜಯಕುಮಾರ್, ಮುಖೇಶ್ ಬಾಲಕೃಷ್ಣನ್ ಆಯ್ಕೆಯಾದರು. ರಾಜ್ಯ ಸಹಾಯಕ ಕಾರ್ಯದರ್ಶಿ ಸತ್ಯನ್ ಮೊಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಿ.ಎನ್. ಚಂದ್ರನ್, ಸಿ.ಪಿ. ಮುರಳಿ, ಮತ್ತು ವಕೀಲ ಗೋವಿಂದನ್ ಪಳ್ಳಿಕಾಪ್ಪಿಲ್ ಭಾಗವಹಿಸಿದರು.

RELATED NEWS

You cannot copy contents of this page