ಕೆಲಸ ನಷ್ಟಗೊಳ್ಳಬಹುದೆಂಬ ಆತಂಕ: ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಕಂಡಕ್ಟರ್ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಕೆಲಸ ನಷ್ಟಗೊಳ್ಳಬಹುದೆಂಬ ಆತಂಕದಿಂದ  18 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವಕ ನೇಣುಬಿಗಿದು ಆತ್ಮಹತ್ಯೆಗೈದ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮುಳಿಯಾರು ಮಜಕ್ಕಾರಿನ ದಿ| ಮಹಾಲಿಂಗ ಪಾಟಾಳಿಯವರ ಪುತ್ರ ಯೋಗೀಶ್ ಕುಮಾರ್ (4೦) ಮೃತಪಟ್ಟ ವ್ಯಕ್ತಿ.  ನೂತನವಾಗಿ ನಿರ್ಮಿಸಿದ ಮನೆಯ ಶೆಡ್‌ನಲ್ಲಿ ಇವರ ಮೃತದೇಹ ಪತ್ತೆಯಾಗಿದೆ.  ಕಾಸರಗೋಡು-ಸುಳ್ಯ ರೂಟ್‌ನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯೋಗೀಶ್ ಕುಮಾರ್ ಕಂಡಕ್ಟರ್ ಆಗಿದ್ದರು. ನಿನ್ನೆ ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಯೋಗೀಶ್ ಹಾಗೂ ತಾಯಿ  ಬೇಬಿ ಮಾತ್ರವೇ ಮನೆಯಲ್ಲಿ ವಾಸಿಸುತ್ತಿ ದ್ದರು. ತಾಯಿ ನಿನ್ನೆ ಕಾಸರಗೋಡು  ಸೂರ್ಲುವಿನಲ್ಲಿರುವ  ತವರು ಮನೆಗೆ ತೆರಳಿದ್ದರು. ಅವರು  ಮರಳಿ ಮನೆಗೆ ಬಂದಾಗ  ಯೋಗೀಶ್ ಶೆಡ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ  ಕಂಡುಬಂದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಘಟನೆ ಬಗ್ಗೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ತಾತ್ಕಾಲಿಕ ಕಂಡಕ್ಟರ್‌ಗಳನ್ನು  ಕೆಲಸದಿಂದ ಹೊರತುಪಡಿಸಬ ಹುದೆಂಬ ಆತಂಕದಿಂದ ಯೋಗೀಶ್ ಕುಮಾರ್ ಆತ್ಮಹತ್ಯೆಗೈದಿರಬಹು ದೆಂದು ಸಂಶಯಿಸುತ್ತಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಹೊಸ ಮನೆಯ ನಿರ್ಮಾಣ ಕೆಲಸ ಪೂರ್ತಿಗೊಳಿಸಿ ಅಲ್ಲಿ ವಾಸ ಆರಂಭಿಸಿದ್ದರು. ಮದುವೆಗೆ ಸಿದ್ಧತೆ ನಡೆಸುತ್ತಿ ದ್ದಂತೆಯೇ  ಯೋಗೀಶ್ ಕುಮಾರ್ ಸಾವಿಗೆ ಶರಣಾದ ದಾರುಣ ಘಟನೆ   ನಡೆದಿದೆ. ಯೋಗೀಶ್ ಕುಮಾರ್‌ರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮೃತರು ತಾಯಿ, ಸಹೋದರಿಯರಾದ  ಜಲಜಾಕ್ಷಿ, ಶೋಭ, ಅರುಣಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page