ಮಾರ್ಪನಡ್ಕ ಭಜನಾ ಮಂದಿರದ ಕಾಣಿಕೆ ಹುಂಡಿ ಕಳವುಗೈದ ಆರೋಪಿ ಸೆರೆ

ಬದಿಯಡ್ಕ:  ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಹೊರಗಡೆ ಇರಿಸಲಾ ಗಿದ್ದ 2 ಕಾಣಿಕೆ  ಹುಂಡಿಗಳನ್ನು ಕಳವುಗೈದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ಆದೂರು ಗ್ರಾಮದ  ಆದೂರು ಪಯಂಗಡಿ ಹೌಸ್‌ನ  ಸಾಬಿತ್ ಎ.ಪಿ (33) ಎಂಬಾತನನ್ನು  ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣ ನೇತೃತ್ವದ  ಪೊಲೀಸರು ಬಂಧಿಸಿದ್ದಾರೆ.  ಜುಲೈ ೨೯ರಂದು  ರಾತ್ರಿ ಕಾಣಿಕೆ ಹುಂಡಿಗಳನ್ನು ಕಳವುಗೈಯ್ಯಲಾಗಿತ್ತು. ಭಜನಾ ಮಂದಿರದ ಹೊರಗಡೆ ಸ್ಥಾಪಿಸಲಾಗಿದ್ದ  ಗುಳಿಗ ದೈವದ ಹುಂಡಿಯಿಂದ ಸುಮಾರು 2 ಸಾವಿರ ರೂ. ಹಾಗೂ ಇನ್ನೊಂದು ಹುಂಡಿಯಿಂದ ಸುಮಾರು 2ಸಾವಿರ ರೂ.ಗಳನ್ನು ಕಳವು ನಡೆಸಲಾಗಿದೆ.  ಈ ಬಗ್ಗೆ ಉಬ್ರಂಗಳ ಪದ್ಮಾರ್ ನಿವಾಸಿ ರಮೇಶ್ ಎಂಬವರು  ಬದಿ ಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ ಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

You cannot copy contents of this page