ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲು 4 ಮನೆಗಳು ನೀರುಪಾಲು ಭೀತಿಯಲ್ಲಿ

ಉಪ್ಪಳ: ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತದಿಂದ ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಮಂಗಲ್ಪಾಡಿ ಪಂಚಾ ಯತ್‌ನ 16ನೇ ವಾರ್ಡ್ ಮುಟ್ಟಂ ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲಾಗು ತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾ ಗಿದೆ. ಈ ರಸ್ತೆ ಸಂಪೂರ್ಣ ನೀರುಪಾಲಾ ದರೆ ಈ ಪ್ರದೇಶದ ನೆಬಿನ್, ಇಬ್ರಾಹಿಂ, ಅನಿಲ್, ಆನಂದ ಎಂಬವರ ಮನೆಗೂ ಅಪಾಯವುಂಟಾಗಲಿದೆ. ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ಕಡಲ್ಕೊ ರೆತ ಹೆಚ್ಚಾಗಿದೆ. ಶಾರದಾನಗರದಲ್ಲಿ ಶಶಿಕಲರ ಮನೆ ನೀರುಪಾಲಾಗಿದ್ದು, ಇಲ್ಲಿನ ಲಲಿತ, ನಿವೇದಿತ, ಗಿರಿಜ ಎಂ ಬವರ ಮನೆಗಳು ಅಪಾಯದಂಚಿನಲ್ಲಿದೆ. ಇವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ನಾಶನಷ್ಟಗೊಂಡ ಕುಟುಂಬಗಳಿಗೆ ಪರಿಹಾರ ಕ್ರಮ ಕೂಡಲೇ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

You cannot copy contents of this page