ಕೆಎಸ್‌ಆರ್‌ಟಿಸಿ ಬಸ್‌ಗಳು ಪರಸ್ಪರ ಢಿಕ್ಕಿ: ಹಲವರಿಗೆ ಗಾಯ

ಹೊಸದುರ್ಗ: ಬೀಮನಡಿ ಪ್ಲಾಚಿಕರ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಪರಸ್ಪರ ಢಿಕ್ಕಿ ಹೊಡೆದು ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ನಿನ್ನೆ ಸಂಜೆ ೫ ಗಂಟೆ ವೇಳೆ ಅಪಘಾತವುಂಟಾಗಿದೆ. ಹೊಸ ದುರ್ಗಕ್ಕೆ ಬರುತ್ತಿದ್ದ ಸೂಪರ್‌ಫಾಸ್ಟ್ ಬಸ್ ಹಾಗೂ ಇರಿಟ್ಟಿಗೆ ತೆರಳುತ್ತಿದ್ದ  ಲಿಮಿಟೆಡ್ ಸ್ಟಾಪ್ ಬಸ್ ಢಿಕ್ಕಿ ಹೊಡೆ ದಿದೆ. ತಕ್ಷಣ ತಲುಪಿದ ನಾಗರಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರನ್ನು ವೆಳ್ಳೆರಿಕುಂಡ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಯಿತು. ಓರ್ವ ಚಾಲಕ ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಢಿಕ್ಕಿಯಿಂದ ಎರಡೂ ಬಸ್‌ಗಳ ಮುಂಭಾಗ ಹಾನಿಗೀಡಾಗಿದೆ.

You cannot copy contents of this page