ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೊಬ್ಬರು  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಳಿಯಡ್ಕ ಕುನ್ನುಪ್ಪಾರ ನಿವಾಸಿ  ದಾಮೋದರನ್ (52) ಮೃತಪಟ್ಟ ವ್ಯಕ್ತಿ.ನಿನ್ನೆ ಸಂಜೆ ಇವರ ಮನೆ ಸಮೀಪದ ಬೇರೊಬ್ಬರ ಜನವಾಸ ವಿಲ್ಲದ ಮನೆಯಲ್ಲಿ ಇವರು  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ದಾಮೋದರನ್‌ರ ಓರ್ವ ಪುತ್ರ ಧನುಷ್ ಎರಡು ತಿಂಗಳ ಹಿಂದೆ ನೇಣು ಬಿಗಿದು ಸಾವಿಗೀಡಾಗಿದ್ದನು. ಇದರಿಂದ ಮನನೊಂದು ದಾಮೋ ದರನ್ ನೇಣು ಬಿಗಿದಿರಬಹುದೆಂದು ಸಂಶಯಿಸಲಾಗುತ್ತಿದೆಯೆಂದು ಸಂಬಂಧಿಕರು ತಿಳಿಸುತ್ತಿದ್ದಾರೆ. ದಿ| ಕೃಷ್ಣನ್ ಎಂಬವರ ಪುತ್ರನಾದ ದಾಮೋದರನ್ ತಾಯಿ ಕೊರಪ್ಪಾಳು, ಪತ್ನಿ ಗೀತಾ, ಮಕ್ಕ ಳಾದ ದಿವ್ಯ, ದೀಕ್ಷಿತ್, ಸಹೋದರ ಲಕ್ಷ್ಮಣನ್, ಸಹೋದರಿ ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಸುಂದರನ್ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page