ಮಂಜೇಶ್ವರ: ಪ್ರಕೃತಿಯ ರಮಣೀಯತೆಯನ್ನು ಆಸ್ವಾದಿಸಬಹುದಾದ ಕುಂಡುಕೊಳಗೆ ಬೀಚ್‌ನಲ್ಲಿ ಮತ್ತೊಮ್ಮೆ ಬೀಚ್ ಫೆಸ್ಟ್ ಆರಂಭಗೊಂಡಿದೆ. ಈ ವರ್ಷದ ಬೀಚ್ ಫೆಸ್ಟ್‌ಗೆ ಸ್ಥಳೀಯ ಪ್ರತಿನಿಧಿ ಮುಂತಾಸ್ ಸಮೀರ ಚಾಲನೆ ನೀಡಿದರು. ಈ ವೇಳೆ ಅಶ್ರಫ್ ಬಡಾಜೆ, ಹರಿಶ್ಚಂದ್ರ ಮಂಜೇಶ್ವರ, ಅಶ್ರಫ್ ಕುಂಜತ್ತೂರು, ದಯಾಕರ ಮಾಡ, ಪಂಚಾಯತ್ ಸದಸ್ಯೆ ರೇಖಾ, ಉದ್ಯಮಿ ಅಲಿಕುಟ್ಟಿ, ಅನ್ವರ್, ಆಸಿಫ್, ಹಾರಿಸ್, ಪ್ರಾಯೋಜಕರಾದ ಶಾನವಾಸ್ ಅಹ್ಮದ್, ಶೆರೀಫ್ ನ್ಯಾಷನಲ್, ಇರ್ಫಾನ್ ಉಪಸ್ಥಿತರಿದ್ದರು. ಡಿಸೆಂಬರ್ 7 ರ ತನಕ ನಡೆಯಲಿರುವ ಬೀಚ್ ಫೆಸ್ಟಿವಲ್ ಮಂಜೇಶ್ವರ ಹಾಗೂ ಆಸುಪಾಸಿನ ಜನತೆಗೆ ಉತ್ಸವದ ಸಂಭ್ರಮವಾಗಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.







