ಕೊಡ್ಯಮ್ಮೆಯಲ್ಲಿ ಲೀಗ್ ರಿಬಲ್‌ಗೆ ಸಹಾಯ ಮಾಡಿದ ಇಬ್ಬರು ಪಕ್ಷದಿಂದ ಹೊರಕ್ಕೆ

ಕುಂಬಳೆ: ಪಂಚಾಯತ್‌ನ ಕೊಡ್ಯಮ್ಮೆ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಲೀಗ್ ಸಕ್ರಿಯ ಕಾರ್ಯಕರ್ತ ಹಾಗೂ ಸಹಾಯಕರಾದ ಇಬ್ಬರನ್ನು  ನೇತೃತ್ವ ಪಕ್ಷದಿಂದ ಹೊರಹಾಕಿದೆ. ಇದರೊಂದಿಗೆ ಲೀಗ್‌ನ ಔಪಚಾರಿಕ ಅಭ್ಯರ್ಥಿ ಹಾಗೂ ಭಿನ್ನಮತೀಯ ಅಭ್ಯರ್ಥಿ ಮಧ್ಯೆಗಿನ ಸ್ಪರ್ಧೆ ತೀವ್ರಗೊಂಡಿದೆ. ಬಿಜೆಪಿ ಹಾಗೂ ಸಿಪಿಎಂನ ಅಭ್ಯರ್ಥಿಗಳು ಇಲ್ಲಿ ಸ್ಪರ್ಧಿಸುತ್ತಾರಾದರೂ ಪ್ರಧಾನ ಸ್ಪರ್ಧೆ ಲೀಗ್‌ನ ಔದ್ಯೋಗಿಕ ಅಭ್ಯರ್ಥಿ ಹಾಗೂ ಭಿನ್ನಮತೀಯ ಅಭ್ಯರ್ಥಿಯ ಮಧ್ಯೆ ಎಂದು ಮತದಾರರು ತಿಳಿಸುತ್ತಾರೆ.  ಆದರೆ ಇದು ಯಾರಿಗೆ ಗುಣಕರವಾಗಲಿದೆ ಎಂಬುದು ಮತ್ತೆ ನಿರ್ಧಾರವಾಗಲಿದೆ.

You cannot copy contents of this page