ಬದಿಯಡ್ಕ: ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿಗಳು ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡರು. ಪಕ್ಷದ ಪ್ರಮುಖ ಡಿ.ಕೆ. ನಾರಾಯಣನ್ ನಾಯರ್, ಜಿಲ್ಲಾ ಪಂಚಾಯತ್ ಬದಿಯಡ್ಕ ಡಿವಿಶನ್ ಅಭ್ಯರ್ಥಿ ರಾಮಪ್ಪ ಮಂಜೇಶ್ವರ, ನೀರ್ಚಾಲು ಬ್ಲೋಕ್ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಪಂ. ಅರ್ಥಿಗಳಾದ ಡಿ. ಶಂಕರ, ಅಶ್ವಿನಿ ಕೆ.ಎಂ., ಹರೀಶ, ಶ್ಯಾಮಪ್ರಸಾದ ಸರಳಿ, ಮಧುಸೂದನ, ಉಷಾ ಪಳ್ಳತ್ತಡ್ಕ, ರಜನಿ ಸಂದೀಪ್, ಬಿಂದ್ಯಾ ಕಾರ್ತಿಕ್ ಜೊತೆಗಿದ್ದರು.







