ಉಪ್ಪಳ: ಹಗಲಿನ ಸೂರ್ಯ ಪ್ರಕಾಶಕ್ಕೆ ಸವಾಲೊಡ್ಡುವ ರೀತಿಯಲ್ಲಿ ಮಂಗಲ್ಪಾಡಿ ಪಂಚಾಯತ್ನ ವಿವಿಧ ಕಡೆಗಳಲ್ಲಿ ಬೀದಿ ದೀಪಗಳು ಉರಿಯುತ್ತಿರುವುದು ಕಂಡುಬಂದಿದೆ. ಹಗಲೂರಾತ್ರಿ ತಿಂಗಳುಗಳಿಂದ ಸತತವಾಗಿ ಲೋ ಮಾಸ್ಟ್ ಬೀದಿ ದೀಪಗಳು ಉರಿಯುತ್ತಿದ್ದು ಇದನ್ನು ನಿಯಂತ್ರಿಸಲು ಪಂಚಾಯತ್ನಲ್ಲಿ ಯಾರೂ ಮುಂದಾಗದಿರುವುದು ಕಂಡು ಬಂದಿದೆ. ಪೆರಿಂಗಡಿ ರಸ್ತೆಯ ಜನಪ್ರಿಯ ಎಂಬಲ್ಲಿ ಸರ್ವೀಸ್ ರಸ್ತೆ ಬದಿಯಲ್ಲಿ ಹಾಗೂ ಕುಬಣೂರು ರಸ್ತೆಯ ಪುಳಿಕುತ್ತಿ ಸ್ಮಶಾನದ ಬಳಿ ಕಳೆದ ಒಂದು ತಿಂಗಳಿಂದ ಸತತವಾಗಿ ಲೋ ಮಾಸ್ಟ್ ಬೀದಿ ದೀಪ ಉರಿಯುತ್ತಿದೆ. ಇದೇ ರೀತಿ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಬೀದಿ ದೀಪಗಳು ಹಗಲೂ ಉರಿಯುತ್ತಿದೆಯೆಂದು ದೂರಲಾಗಿದೆ. ಅನಗತ್ಯ ವಾಗಿ ಉರಿದು ವಿದ್ಯುತ್ ನಷ್ಟವಾಗುವುದರಿಂದ ಪಂಚಾ ಯತ್ಗೆ ಭಾರೀ ಹೊರೆ ಉಂಟಾಗಲಿದೆಯೆಂದು ಸಾರ್ವ ಜನಿರು ಅಭಿಪ್ರಾಯಪಟ್ಟಿದ್ದು, ಬೀದಿ ದೀಪ ಹಗಲಿನಲ್ಲಿ ನಂದಿಸುವ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.







