ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ಕಯ್ಯಾರ್ ಕ್ರಿಸ್ತ ರಾಜ ದೇವಾಲಯದ ದಲ್ಲಿ ನಡೆದ ಬಲಿಪೂಜೆ ಯನ್ನು ರಾಂಚಿ ಸೆಮಿನರಿಯ ನಿರ್ದೇಶಕ ಫಾದರ್ ಜೋನ್ ಕ್ರಾಸ್ತ ನೆರವೇರಿಸಿದರು. ದೇವಾಲಯದ ಧರ್ಮಗುರು ಫಾದರ್ ವಿಶಾಲ್ ಮೋನಿಸ್ ವಿಧಿ ವಿಧಾನ ನೆರವೇರಿಸಿದರು . ಬಳಿಕ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳು ಜರಗಿತು.
ವಿವಿಧ ಚರ್ಚ್ಗಳಲ್ಲಿ ಕ್ರಿಸ್ಮಸ್ನ್ನು ಸಂಭ್ರಮ ದಿಂದ ಆಚರಿಸಲಾಯಿತು. ದಿವ್ಯ ಬಲಿಪೂಜೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಗೋದಲಿ, ನಕ್ಷತ್ರ ಸೇರಿದಂತೆ ದೀಪಾಲಂಕಾರ ಗಳಿಂದ ಚರ್ಚ್ಗಳು ಗಮನ ಸೆಳೆಯಿತು. ಕ್ರಿಸ್ಮಸ್ ಗೀತೆಗಳನ್ನು ಹಾಡಿ ಕ್ರಿಸ್ತ ರ ಜನನವನ್ನು ಸ್ಮರಿಸಿ ನಮಿಸಲಾಯಿತು.







