ಮೀಂಜ: ಬೆಜ್ಜ ಅಗ್ರಾಲ ನಿವಾಸಿ ದೇವರಾಜ್ ಶೆಟ್ಟಿಯವರ ಪತ್ನಿ ಶಾಂಭವಿ ಶೆಟ್ಟಿ (52) ನಿಧನ ಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಕಳೆದ ಒಂದು ತಿಂಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮೃತರು ಪತಿ, ಮಕ್ಕಳಾದ ಮಾನಸ, ಧನುಷ್, ಮನೀಷ, ಅಳಿಯ ರಮೇಶ್ ಶೆಟ್ಟಿ, ಸಹೋದರಿಯರಾದ ಗುಲಾಬಿ, ಚಂದ್ರಾವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಶ್ರೀನಿವಾಸ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.
ಶಾಂಭವಿ ಶೆಟ್ಟಿಯವರ ನಿಧನಕ್ಕೆ ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಸಂತಾಪ ಸೂಚಿಸಿದೆ.







