ಎಕೆಪಿಎ ಕಾಸರಗೋಡು ಈಸ್ಟ್ ಘಟಕದಿಂದ ಕ್ರಿಸ್ಮಸ್ ಆಚರಣೆ

ಬದಿಯಡ್ಕ: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋ ಸಿಯೇಶನ್ ಕಾಸರಗೋಡು ಈಸ್ಟ್ ಘಟಕದ ಕ್ರಿಸ್ಮಸ್ ದಿನಾಚರಣೆ ಬದಿಯಡ್ಕ ಬೀಜಂತಡ್ಕದ ಸ್ನೇಹಾಲಯದಲ್ಲಿ ಜರಗಿತು. ಕೇಕ್ ತುಂಡರಿಸಿ, ಸ್ನೇಹಾಲಯದ ನಿವಾಸಿಗಳಿಗೆ ಆಹಾರ ವಿತರಿಸಿ ಸಂಭ್ರಮಿಸಲಾಯಿತು. ಯೂನಿಟ್ ಅಧ್ಯಕ್ಷ ರಾಜಶೇಖರ ಅಧ್ಯಕ್ಷತೆ ವಹಿಸಿದರು.

ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್ ವಿ.ಎನ್, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಕೋಶಾಧಿಕಾರಿ ಶ್ರೀಕಾಂತ್, ಪಿಆರ್‌ಒ ಮನೀಶ್, ಜೊತೆ ಕಾರ್ಯದರ್ಶಿ ಸುರೇಶ್ ಚಂದ್ರ, ಸ್ನೇಹಾಲಯದ ಮದರ್ ಬೀನ, ಸಿಸ್ಟರ್ ಬಿಂದು, ರೋಸ್‌ಮೇರಿ, ಸಿಸ್ಟರ್ ಮೇರಿಮಾತ ಭಾಗವಹಿಸಿದರು. ಕಾರ್ಯದರ್ಶಿ ಅಖಿಲ್ ಸ್ವಾಗತಿಸಿದರು.

RELATED NEWS

You cannot copy contents of this page