ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸುಶಾಸನ ದಿನಾಚರಣೆ

ಬದಿಯಡ್ಕ: ಮಾಜಿ ಪ್ರಧಾನಿ  ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಸುಶಾಸನ ದಿನವಾಗಿ ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿ, ಹಸಿವುಮುಕ್ತ, ದಾರಿದ್ರ್ಯಮುಕ್ತ, ಭಯಮುಕ್ತ ವಾತಾವರಣದ ಕನಸು ಕಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಬಿತ್ತಿದ ರಾಷ್ಟ್ರಭಕ್ತಿಯ ಬೀಜ ಇಂದು ವಿಶ್ವದಲ್ಲೇ ಗುರುತಿಸುವ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದರು. ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಡಲ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಜಿ.ಪಂ. ಸದಸ್ಯ, ರಾಮಪ್ಪ ಮಂಜೇಶ್ವರ, ಜಿಲ್ಲಾ ಜೊತೆ ಕಾರ್ಯ ದರ್ಶಿ ಅಶ್ವಿನಿ ಕೆ.ಎಂ, ಬದಿಯಡ್ಕ ಚುನಾವಣಾ ಸಮಿತಿ ಅಧ್ಯಕ್ಷ ಜಯರಾಮ ಚೆಟ್ಟಿಯಾರ್ ಮಾತನಾಡಿದರು. ಟ್ರಸ್ಟ್‌ನ ಅಧ್ಯಕ್ಷ ದಾಮೋದರ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ವಕೀಲ ಗಣೇಶ್ ಬಿ. ಪ್ರಾಸ್ತಾಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಬಿ.ಕೆ. ವಂದಿಸಿ ದರು. ವಿಜಯಸಾಯಿ ಬದಿಯಡ್ಕ, ಮಹೇಶ್ ವಳಕುಂಜ, ಡಿ. ಶಂಕರ, ಹರೀಶ ಕಿಳಿಂಗಾರು, ಶ್ಯಾಮ್‌ಪ್ರಸಾದ್ ಸರಳಿ, ಬಿಂದ್ಯಾ ಕಾರ್ತಿಕ್ ನೀರ್ಚಾಲು, ಆಶ್ರಮದ ಹಿತೈಷಿಗಳು, ಸಿಬ್ಬಂದಿಗಳು ಪಾಲ್ಗೊಂಡರು.

RELATED NEWS

You cannot copy contents of this page