ಕಲ್ಲಿಕೋಟೆ: ವಿಧಾನಸಭಾ ಚುನಾ ವಣೆಯಲ್ಲಿ ಲೀಗ್‌ಗೆ ಹೆಚ್ಚುವರಿ ಸೀಟ್‌ಗೆ ಅರ್ಹತೆಯಿದೆ ಎಂದು ಪಾಣಕ್ಕಾಡ್ ಸಾದಿಖ್ ಅಲಿ ತಂಙಳ್ ತಿಳಿಸಿದ್ದಾರೆ. ಒಕ್ಕೂಟದ ಸಭೆಯಲ್ಲಿ ಈ ವಿಷಯ ವನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿ ದ್ದಾರೆ. ಕಲ್ಲಿಕೋಟೆಯಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಕುಂಞಾಲಿಕುಟ್ಟಿ ಲೀಗನ್ನು ಚುನಾವಣೆಯಲ್ಲಿ ಮುನ್ನಡೆಸು ವರು. ಈ ಬಾರಿ ಮಹಿಳಾ ಅಭ್ಯರ್ಥಿ ಇರಬಹುದೆಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಬಗ್ಗೆ ಲೀಗ್ ನಿರ್ದೇಶ ಮುಂದಿಡು ವುದಿಲ್ಲ. ಆ ವಿಷಯ ಕಾಂಗ್ರೆಸ್ ತೀರ್ಮಾನಿಸಲಿ. ಕೆಲವು ಸೀಟುಗಳನ್ನು ಅದಲಿಬದಲಿ ಮಾಡಬೇಕೆಂಬ ಆಗ್ರಹ ಕಾರ್ಯಕರ್ತರಲ್ಲಿದೆ. ಈ ವಿಷಯದಲ್ಲಿ ಚರ್ಚೆ ನಡೆಸಲಾಗುವುದು. ಹಾಲಿ ಶಾಸ ಕರೆಲ್ಲರೂ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವರೇ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಾಗದು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕೋಟ್ಟಯಂ ಸಹಿತವಿರುವ ಜಿಲ್ಲೆಗಳಲ್ಲಿ ಸ್ಪರ್ಧಿಸಲು ಆಗ್ರಹವಿದೆ. ವೆಲ್ಫೇರ್ ಪಕ್ಷದೊಂದಿಗೆ ಮೈತ್ರಿ ಕೂಟಕ್ಕೆ ಸಂಬಂಧವಿಲ್ಲ. ಆದರೆ ಮತ ಬೇಡ ಎಂದು ಹೇಳುವುದಿಲ್ಲ. ವೆಳ್ಳಾಪಳ್ಳಿಯವರನ್ನು ತನ್ನ ಕಾರಿನಲ್ಲೂ ಹತ್ತಿಸುವುದಿಲ್ಲವೆಂದು ತಂಙಳ್ ಸ್ಪಷ್ಟಪಡಿಸಿದ್ದಾರೆ. ಚುನಾವಣೆಯಲ್ಲಿ 100 ಸೀಟು ಮೈತ್ರಿಕೂಟ ಗಳಿಸಲಿದೆ ಎಂದು ಅವರು ನುಡಿದರು. ಕೇರಳ ಕಾಂಗ್ರೆಸ್ ಮಾಣಿ ವಿಭಾಗವನ್ನು ಐಕ್ಯರಂಗಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯತ್ನ ಮುಂದುವರಿಯುತ್ತಿದೆ ಎಂದೂ ತಂಙಳ್ ತಿಳಿಸಿದ್ದಾರೆ.







