ಕಾಸರಗೋಡು: ಮನೆಯಲ್ಲಿ ಏಕಾಂಗಿಯಾಗಿದ್ದ ಪ್ಲಸ್ವನ್ ವಿದ್ಯಾರ್ಥಿನಿಗೆ ವ್ಯಕ್ತಿಯೋರ್ವ ಕಿರುಕುಳ ನೀಡಲು ಯತ್ನಿಸಿರು ವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪೋಕ್ಸೋ ಕೇಸು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಸಂಬಂಧಿ ಕನಾದ ಸಂತೋಷ್ (5೦) ಎಂಬಾತ ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಘಟನೆ ನಡೆದಿದೆ. ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿ ಮಾತ್ರವೇ ಮನೆಯಲ್ಲಿದ್ದಳು. ಈವೇಳೆ ಮನೆಗೆ ತಲುಪಿದ ಆರೋಪಿ ಬಾಲಕಿಯನ್ನು ಬಿಗಿದಪ್ಪಿಕೊಂಡಿರು ವುದಾಗಿ ದೂರಲಾಗಿದೆ. ಬಾಲಕಿ ಬೊಬ್ಬೆ ಹಾಕುತ್ತಾ ಹೊರಗೆ ಓಡಿದ್ದು ವಿಷಯ ತಿಳಿದು ತಲುಪಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ತಂದೆ ತಾಯಿ ತಲುಪಿದ ಬಳಿಕ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.







