ಕಾಸರಗೋಡು: ಈ ವರ್ಷ ನಡೆಯಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಉಪಯೋಗಿಸುವ ಮತಯಂತ್ರಗಳ (ಇವಿಎಂ) ಹಾಗೂ ವಿವಿ ಪ್ಯಾಟ್ಗಳ ಮೊದಲ ಹಂತದ ಪರಿಶೀಲನೆ ಇಂದು ಬೆಳಿಗ್ಗೆ ಆರಂಭಿಸ ಲಾಗಿದೆ. ಕಾಸರಗೋಡು ಕಲೆಕ್ಟರೇಟ್ನ ವೇರ್ ಹೌಸ್ನಲ್ಲಿ ಪ್ರತ್ಯೇಕ ಸಿದ್ಧಪಡಿಸಿದ ಹಾಲ್ನಲ್ಲಿ ನಡೆಯುವ ಪರಿಶೀಲನೆ ಜನವರಿ ೨೫ರ ವರೆಗೆ ಮುಂದುವರಿಯಲಿದೆ. ಭಾರತ್ ಇಲೆಕ್ಟ್ರೋ ನಿಕ್ಸ್ ಲಿಮಿಟೆಡ್ ನ ೫ ಮಂದಿ ಅಂಗೀಕೃತ ಇಂಜಿನಿಯರ್ರ ನೇತೃತ್ವದಲ್ಲಿ ಜಿಲ್ಲಾ ಚುನಾವಣೆ ಅಧಿಕಾರಿಯ ನೇರ ಮೇಲ್ನೋಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲಾ ಚುನಾವಣಾ ಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ರ ನೇತೃತ್ವದಲ್ಲಿ ವೇರ್ ಹೌಸ್ ಇಂದು ಬೆಳಿಗ್ಗೆ ತೆರೆಯಲಾಯಿತು.
ಇಲೆಕ್ಷನ್ ಡೆಪ್ಯುಟಿ ಕಲೆಕ್ಟರ್ ಗೋಪಕುಮಾರ್, ಎಎನ್ಎಫ್ಎಲ್ಸಿ ಸುಪರ್ವೈಸರ್ ಲಿಪು ಎಸ್ ಲಾರೆನ್ಸ್, ಇವಿಎಂ ನೋಡೆಲ್ ಆಫೀಸರ್ ರಾಘವನ್ ಕೆ, ಚುನಾವಣಾ ವಿಭಾಗ ಜ್ಯೂನಿಯರ್ ಸುಪರಿನ್ಟೆಂಡೆಂಟ್ ರಾಜೀವನ್ ಎ, ರಾಜಕೀಯ ಪಕ್ಷ ಪ್ರತಿನಿಧಿಗಳಾದ ಹರೀಶ್ ಬಿ ನಂಬ್ಯಾರ್, ಉಮ್ಮರ್ ಪಾಡ್ಲಕ್ಕ ಉಪಸ್ಥಿತರಿದ್ದರು.
ಚುನಾವಣಾ ಆಯೋಗದ ಪ್ರಸ್ತುತ ನಿರ್ದೇಶಗಳ ಪ್ರಕಾರ ಎಫ್ಎಲ್ಸಿ ಯಶಸ್ವಿಯಾಗುವ ಯಂತ್ರಗಳನ್ನು ಮಾತ್ರವೇ ಮುಂದಿನ ಚುನಾವಣೆಯಲ್ಲಿ ಉಪಯೋಗಿಸಲಾ ಗುವುದು. ಜಿಲ್ಲಾ ಚುನಾವಣಾ ಅಧಿಕಾ ರಿಯ ಹೊರತು ಮುಖ್ಯ ಚುನಾವಣಾ ಅಧಿಕಾರಿ, ಕೇಂದ್ರ ಚುನಾವಣಾ ಆಯೋಗ ವಿವಿಧ ಸ್ಥಳಗಳಲ್ಲಿ ಈ ಪ್ರಕ್ರಿಯೆ ಮೇಲೆ ನಿಗಾ ಇರಿಸುತ್ತಿದೆ. ಮತಯಂತ್ರಗಳ ಚಟುವಟಿಕೆ ಸರಿಯಾಗಿಯೇ ಇದೆ ಎಂದು ಖಚಿತ ಪಡಿಸಲು ಎಲ್ಲಾ ರೀತಿಯ ಸುರಕ್ಷಾ ಕ್ರಮೀಕರಣಗಳನ್ನು ಜಿಲ್ಲಾಡಳಿತ ಪೂರ್ತಿಗೊಳಿಸಿದೆ.







