ಮೀಯಪದವು: ರಾಜ್ಯದ ಎಡರಂಗ ಸರಕಾರ ಘೋಷಿಸಿದ 36ವರ್ಷದಿಂದ 60 ವರ್ಷದವರೆಗಿನ ಮಹಿಳೆಯರಿಗೆ ಸ್ತ್ರೀ ಸುರಕ್ಷಾ ಯೋಜನೆ ಪ್ರಕಾರ ತಿಂಗಳಿಗೆ 1000 ರೂ. ಲಭಿಸುವುದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ. ಈ ಅರ್ಜಿ ಸಲ್ಲಿಕೆಗೆ ಮೀಯಪದವಿನಲ್ಲಿರುವ ಕೆಲವು ಆನ್‌ಲೈನ್ ಸಂಸ್ಥೆಗಳ ಮಾಲಿಕರು 100ರಿಂದ 150 ರೂ.ವರೆಗೆ ವಸೂಲಿ ಮಾಡುತ್ತಿರುವುದಾಗಿ ಸಿಪಿಎಂ ಆರೋಪಿಸಿದೆ. ಈ ಬಗ್ಗೆ ಅರ್ಜಿ ಸಲ್ಲಿಸಲು ತಲುಪಿದ ಮಹಿಳೆಯರು ಸಿಪಿಎಂಗೆ ದೂರಿರುವುದಾಗಿಯೂ ಮುಖಂಡರು ತಿಳಿಸಿದ್ದಾರೆ. ಅರ್ಜಿ ಭರ್ತಿಗೊಳಿಸಿ ನೀಡಲು ಅಧಿಕ ಮೊತ್ತ ವಸೂಲು ಮಾಡುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಪಿಎಂ ಮೀಂಜ ಫಸ್ಟ್ ಲೋಕಲ್ ಸಮಿತಿ ದೂರು ನೀಡಿದೆ.







