ಮಂಜೇಶ್ವರ ರೈಲು ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಜೇಶ್ವರ: ರೈಲು ಡಿಕ್ಕಿಹೊಡೆದ ಸ್ಥಿತಿಯಲ್ಲಿ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ ಮಂಜೇಶ್ವರದಲ್ಲಿರುವ ಹೆದ್ದಾರಿ ನಿಯಂತ್ರಣ ಕೇಂದ್ರದ ಹಿಂಭಾಗದ ರೈಲು ಹಳಿಯಲ್ಲಿ ಸುಮಾರು 65 ವರ್ಷ ಪ್ರಾಯ ಅಂದಾಜಿಸುವ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಮಂಗಳೂರಿನಿAದ ಕಾಸರಗೋಡಿಗೆ ತೆರಳುವ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಲುಂಗಿ ಮತ್ತು ಅಂಗಿ ಧರಿಸಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತೆರಳಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

RELATED NEWS

You cannot copy contents of this page