ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸೊಸೈಟಿಯಿಂದ 4.76 ಕೋಟಿ ರೂ.ಗಳ ವಂಚನೆ: ಮತ್ತೆ ನಾಲ್ಕು ಮಂದಿ ಸೆರೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಸಹಕಾರಿ ಸಂಘದಲ್ಲಿ 4.76 ಕೋಟಿ ರೂಪಾಯಿಗಳ ವಂಚನೆ ನಡೆಸಿದ ಪ್ರಕರಣದಲ್ಲಿ ಮತ್ತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಪಳ್ಳಿಕರೆಯ ಅಬೂಬಕ್ಕರ್ (61), ಪೈವಳಿಕೆ ಬಾಯಾರಿನ ಅಬ್ದುಲ್ ಅಸೀಸ್ (55), ಏತಡ್ಕದ ಆರಿಫ್ (43), ನೆಕ್ರಾಜೆ ಮವ್ವಾರಿನ ಶಂಸುದ್ದೀನ್ (41) ಎಂಬಿವರನ್ನು ಕಣ್ಣೂರು ಕ್ರೈಂ ಬ್ರಾಂಚ್ ಬಂಧಿಸಿದೆ.

ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಸಂಘದಲ್ಲಿ ಈ ವಂಚನೆ ನಡೆದಿದೆ. ವಂಚನಾ ತಂಡಕ್ಕೆ ವಿವಿಧ ಸ್ಥಳಗಳಲ್ಲಿ ವಂಚನೆ ನಡೆಸಲು ಸೂಕ್ತ ಸಂಸ್ಥೆಗಳನ್ನು ತೋರಿಸಿಕೊಟ್ಟು ಹೇಗೆ ವಂಚನೆ ನಡೆಸಬೇಕೆಂದು ಉಪಾಯ ಹೇಳಿಕೊಟ್ಟಿರುವುದು ಪಳ್ಳಿಕ್ಕರೆಯ ಅಬೂಬಕ್ಕರ್ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕಾಗಿ   ಆರೋಪಿಗಳಿಂದ  ಲಕ್ಷಾಂತರ ರೂಪಾಯಿಗಳನ್ನು ಈತ ಪಡೆದುಕೊಂಡಿರುವುದಾಗಿಯೂ ಸೂಚನೆಯಿದೆ. ಇತರ ಆರೋಪಿಗಳು  ನಕಲಿ ಹೆಸರುಗಳಲ್ಲಿ ಚಿನ್ನ ಅಡವಿರಿಸಿ ಹಣ ಅಪಹರಿಸಿರುವುದಾಗಿ ಒಪ್ಪಿಕೊಂಡಿರುವುದಾಗಿ ಹೇಳಲಾ ಗುತ್ತಿದೆ. ಇದೀಗ ನಾಲ್ಕು ಮಂದಿಯ ಬಂಧನದೊಂದಿಗೆ ಈ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 15ಕ್ಕೇರಿದೆ.

ಬ್ಯಾಂಕ್ ಲಾಕರ್‌ನಿಂದ 332 ಪವನ್ ಚಿನ್ನಾಭರಣಗಳನ್ನು ಲಪಟಾಯಿಸಿದ ಸೊಸೈಟಿಯ ಸೆಕ್ರೆಟರಿ ಕರ್ಮಂತೋಡಿ  ಬಾಳಕಂಡ ನಿವಾಸಿ ಕೆ. ರತೀಶ್ ಒಂದನೇ ಆರೋಪಿಯಾಗಿದ್ದಾನೆ. ಚಿನ್ನ ಅಡವಿರಿಸಲು ಸಹಕರಿಸಿದ ಪಳ್ಳಿಕ್ಕರೆಯ ಫಾಯಿಸ, ಪೆರಿಯಾದ ಶಫೀಕ್, ಪತ್ನಿ ಫಾತಿಮತ್ ತಾಹಿರ, ರತೀಶ್ ಹಣ ನೀಡಿದ ಬೇಕಲ್ ಹದ್ದಾದ್‌ನಗರದ ಕೆ. ಅಹಮ್ಮದ್ ಬಶೀರ್, ಪರಕ್ಲಾಯಿ ಏಳನೇ ಮೈಲಿನ ಎ.ಅಬ್ದುಲ್ ಗಫೂರ್, ನೆಲ್ಲಿಕಟ್ಟೆಯ ಎ. ಅನಿಲ್ ಕುಮಾರ್, ಪಯ್ಯನ್ನೂರಿನ  ಜಬ್ಬಾರ್ ಮಂಜಕ್ಕಂಡಿ, ಕಲ್ಲಿಕೋಟೆ ಅರಕ್ಕಿಣರಿನ ಸಿ. ನಬೀಲ್ ಎಂಬಿವರ ಸಹಿತ ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿದೆ.  

ಕ್ರೈಂ ಬ್ರಾಂಚ್ ಸಿಐ ಬಿ. ಅನೀಶ್ ಕುಮಾರ್ ಆರೋಪಿಗಳನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page