ಕಾಸರಗೋಡು: ಮನೆ ಜೀರ್ಣಗೊಂಡು ನಾಶವಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ರಬ್ಬರ್ ಕೃಷಿಕ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದೆ. ಬೇಡಡ್ಕ ಕರಿವೇಡಗಂ ಪಳ್ಳಕ್ಕಾಟ್ ಹೌಸ್ನ ವಿ.ಎನ್. ಸುಕುಮಾರನ್ (76) ಮೃತಪಟ್ಟವರು. ನಿನ್ನೆ ಇವರು ಮನೆಯ ಮುಂಭಾಗದಲ್ಲಿರುವ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿತ್ತು. ಬೇಡಡ್ಕ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.
ಮೃತರು ಪತ್ನಿ ಪುಷ್ಪವಲ್ಲಿ, ಮಕ್ಕಳಾದ ಶಾಜಿ, ಶೈಜು, ಸೊಸೆಯಂದಿರಾದ ಸುಧಾ, ನವ್ಯ, ಸಹೋದರರಾದ ಶಿವನ್, ವಿಜಯನ್, ರಾಜನ್, ಸಹೋದರಿಯರಾದ ರಮಣಿ, ಕುಂಞಾಮಿನಿ, ತಂಗಮ್, ಶೋಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







