ಜಿಲ್ಲೆಯಲ್ಲಿ ಪೊಲೀಸ್, ಅಬಕಾರಿ ತಂಡದಿಂದ ಕಾರ್ಯಾಚರಣೆ: ಭಾರೀ ಪ್ರಮಾಣದ ಮಾದಕದ್ರವ್ಯ, ಗಾಂಜಾ ವಶ; ಮೂವರ ಸೆರೆ

ಕಾಸರಗೋಡು: ಜಿಲ್ಲೆಯಲ್ಲಿ ಪೊಲೀಸರು ಮತ್ತು ಅಬಕಾರಿ ತಂಡ ಪ್ರತ್ಯೇಕವಾಗಿ ನಡೆಸಿದ ಮೂರು ಕಾರ್ಯಾಚರಣೆಗಳಲ್ಲಾಗಿ ಭಾರೀ ಪ್ರಮಾಣದ ಮಾದಕದ್ರವ್ಯ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನಿರ್ದೇಶ ಪ್ರಕಾರ ಜಿಲ್ಲೆಯ ಮಾದಕದ್ರವ್ಯ ಪತ್ತೆ ಸ್ಕ್ವಾಡ್ ಮತ್ತು ಕುಂಬಳೆ ಪೊಲೀಸರು ಮಂಗಲ್ಪಾಡಿ ಸೋಂಕಾಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ 54 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಮಂಗಲ್ಪಾಡಿ ಅಂಬಾರ್‌ಪಳ್ಳಂ ನಿವಾಸಿ ಇದ್ದೀನ್ ಕುಂಞಿ ಯಾನೆ ಇರ್ಷಾದ್ (34) ಎಂಬಾತನನ್ನು ವಾಹನ ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ರೀತಿ ಪೊಲೀಸರಿಗೆ ಲಭಿಸಿದ ಗುಪ್ತ ಮಾಹಿತಿ ಪ್ರಕಾರ ಬೇಕಲ ಪೊಲೀಸರು ಕೋಟಿಕುಳಂ ರೈಲ್ವೇ ಪ್ಲಾಟ್‌ಫಾಮ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1.894 ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಪೆರಿಯ ಕುಣಿಯ ಅರಫನಗರದ ಹಬೀರ್ ರಹ್ಮಾನ್ ಎ.(37) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್‌ರ ಮೇಲ್ನೋಟದಲ್ಲಿ ನೈಟ್ ಆಸ್ಕರ್ ಡ್ಯೂಟಿ ಆಫೀಸರ್, ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಶೈನ್ ಕೆ.ಪಿ, ಕುಂಬಳೆ ಎಸ್‌ಐ ಆನಂದಕೃಷ್ಣನ್ ಆರ್. ಮೆನೋನ್, ಸೀನಿಯರ್ ಪೊಲೀಸ್ ಆಫೀಸರ್‌ಗಳಾದ ಚಂದ್ರನ್, ಕಲೇಶ್, ಉದಯನ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಮೊಹಮ್ಮದ್ ಆರೀಫ್, ಶೈಜು, ನಿಜಿನ್, ಬಕ್ತಸೆಲ್ವನ್, ರಿತೀಶ್ ಎಂಬವರನ್ನೊಳಗೊಂಡ ತಂಡ ಮಂಗಲ್ಪಾಡಿಯಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಪಳ್ಳಿಕರೆಯಲ್ಲಿ ನಡೆಸಿದ ಗಾಂಜಾ ಬೇಟೆ ಕಾರ್ಯಾಚರಣೆಯ ನೇತೃತ್ವವನ್ನು ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್‌ರ ಮೇಲ್ನೋಟದಲ್ಲಿ ಬೇಕಲ್ ಸಬ್ ಇನ್ಸ್‌ಪೆಕ್ಟರ್ ಅಖಿಲ್ ಸೆಬಾಸ್ಟಿಯನ್, ಪ್ರೊಬೆಷನರಿ ಎಸ್‌ಐ ರೋಶಿತ್, ಮತ್ತಿತರ ಪೊಲೀಸರ್‌ಗಳಾದ ಧನೇಶ್, ಹರೀಶ್, ಕುಂಞ್ಯುಣ್ಣಿ ಎಂಬವರನ್ನೊಳಗೊಂಡ ತಂಡ ನಡೆಸಿದೆ.

ಇದೇ ರೀತಿ ಮಧೂರು ಎಸ್‌ಪಿ ನಗರ- ಮುಟ್ಟತ್ತೋಡಿ ರಸ್ತೆ ಬಳಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿಷ್ಣುಪ್ರಕಾಶ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ 13.22 ಗ್ರಾಂ ಎಂಡಿಎಂಎ ಹಾಗೂ 11.22 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಬಂಧಿಸಿ ತಳಂಗರೆ ಕೋಳಿಯಾಡ್ ವೀಡ್‌ನ ನೌಶಾದ್ ಪಿ.ಎನ್.(36) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾ ಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ರಮೇಶನ್ ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸುಧೀರ್ ಪಾರಮಲ್, ಮಂಜುನಾಥ್, ಶೈಲೇಶ್ ಕುಮಾರ್, ಶಿಜಿತ್ ವಿ.ವಿ, ಶ್ಯಾಮ್‌ಜಿತ್ ಮತ್ತು ಅಶ್ವತಿ ಎಂಬವರು ಒಳಗೊಂಡಿದ್ದಾರೆ.

You cannot copy contents of this page