ಉಪ್ಪಳ: ಜೋಡುಕಲ್ಲು ಪಟ್ಲ ನಿವಾಸಿ, ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ಮೊಹಮ್ಮದ್ ಪಟ್ಲ (68) ಇತ್ತೀಚೆಗೆ ಅಲ್ಪಕಾಲದ ಅಸೌಖ್ಯ ದಿಂದ ನಿಧನರಾದರು. ಕಯ್ಯಾರು ವಾರ್ಡ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಹಸೀನಾ, ಶಸೀನಾ, ನೌಶಾದ್ (ಪೈವಳಿಕೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿ), ನೌಫಲ್, ರೆಹಾನಾ, ರಂಸೀನ, ಶಂಸೀನ, ರಿಶಾನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್., ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ ರೈ ಕಯ್ಯಾರು, ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್, ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಾಸ್ತರ್, ಸದಸ್ಯೆ ಪ್ರಿನ್ಸಿ ಡಿ ಸೋಜ, ನಾಯಕರಾದ ಲಕ್ಷ್ಮಣ ಪ್ರಭು ಕುಂಬಳೆ, ಶಾಜಿ, ನಾರಾಯಣ, ಅಬ್ದುಲ್ಲ ಹಾಜಿ, ಶಿವರಾಮ ಶೆಟ್ಟಿ, ಸಚ್ಚಿದಾನಂದ ರೈ, ಎಡ್ವರ್ಡ್, ಪಾವಲ್ ಡಿ ಸೋಜ, ವಿನ್ಸೆಂಟ್ ಮೊದಲಾದವರು ಭೇಟಿ ನೀಡಿದರು.






