ಆರಿಕ್ಕಾಡಿ ಟೋಲ್ ಪ್ಲಾಜಾ ಮುಚ್ಚುಗಡೆಗೆ ಬಿಜೆಪಿ ಕಾರಣ- ಎಂ.ಎಲ್. ಅಶ್ವಿನಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಟೋಲ್ ಪ್ಲಾಜಾವನ್ನು ಮುಚ್ಚುಗಡೆಗೊಳಿಸಿದ್ದು ಬಿಜೆಪಿ ನಡೆಸಿದ ನಿಶ್ಯಬ್ದ ಚಟುವಟಿಕೆಗಳ ಫಲವಾಗಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹಕ್ಕು ಮಂಡಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಿನ್ನೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಶ್ವಿನಿ ನಿಲುವು ಸ್ಪಷ್ಟಪಡಿಸಿದ್ದಾರೆ. ಮಂಡಲ ಅಧ್ಯಕ್ಷರಿಂದ ಆರಂಭಿಸಿ ಬಿಜೆಪಿಯ ರಾಷ್ಟ್ರೀಯ ನಾಯಕತ್ವದವರೆಗಿರು ವವರು ಮಧ್ಯ ಪ್ರವೇಶಿಸಿದ ಫಲವಾಗಿ ಟೋಲ್ ಪ್ಲಾಜಾವನ್ನು ಮುಚ್ಚಲು ತೀರ್ಮಾನಿಸಲಾಗಿದೆ.

ಮುಷ್ಕರ ನಡೆಸಿಯೋ, ಕೇಸು ದಾಖಲಿಸಿಯಲ್ಲ ಈ ವಿಷಯದಲ್ಲಿ ವ್ಯವಹರಿಸಬೇಕಾಗಿರುವುದು. ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿಯದೆ ರಾಜಕೀಯ ಲಾಭಕ್ಕೆ ಬೇಕಾಗಿ ಮುಷ್ಕರ ನಡೆಸಲಾಗಿದೆ. ಆದರೆ ಅದು ಪರಾಜಯಗೊಂಡಿದೆ. ಸಾರ್ವಜನಿಕ ಸೊತ್ತನ್ನು ಹಾನಿಗೈದು ಮುಷ್ಕರ ನಡೆಸಲಾಗಿದೆ. ಮುಷ್ಕರ ನಡೆಸದಿರುತ್ತಿದ್ದರೆ  ಟೋಲ್ ಪ್ಲಾಜಾ ಈ ಮೊದಲೇ ಮುಚ್ಚಬಹುದಾಗಿತ್ತು ಎಂದು ಅಶ್ವಿನಿ ನುಡಿದರು. ಸರ್ವಪಕ್ಷ ಮುಷ್ಕರ ಸಮಿತಿ ರೂಪುಗೊಂಡ ಬಗ್ಗೆ ಬಿಜೆಪಿಗೆ ತಿಳಿದಿಲ್ಲ. ಆಮಂತ್ರಿಸದ ವಿವಾಹಕ್ಕೆ  ಹೋಗುವವರಲ್ಲ ಬಿಜೆಪಿಯವರು. ಜನರ ಜೊತೆಗೆ ನಿಂತು ಕೆಲಸ ಮಾಡಲಾಗಿದೆ. ಮಂಡಲದ ಯಾವುದೇ ವಿಷಯದ ಬಗ್ಗೆ ಮಾತನಾಡಲು ಕೂಡಾ ಶಾಸಕರು ಲಭಿಸುತ್ತಿಲ್ಲವೆಂದು, ಮಂಡಲದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯರಾಗಿಲ್ಲವೆಂದು ಅಶ್ವಿನಿ ಆರೋಪಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶನ್, ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಕುಮಾರ್ ಮೊದಲಾದವರು ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿದರು.

You cannot copy contents of this page