ಕಾಸರಗೋಡು: ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆಗಳನ್ನು ಮಾರಾಟ ಮಾಡಿ ಹಣ ಎಗರಿಸಲೆ ತ್ನಿಸುವ ತಂಡವೊಂದನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಮಂಡ್ಯ ನಿವಾಸಿ ಗಳಾದ ಅರ್ಜುನ್ ಸೋಲಂಕಿ (30), ಗಣೇಶ್ ಸೋಲಂಕಿ (53), ಹರಿಲಾಲ್ (37) ಮತ್ತು ಜೀವನ್ಲಾಲ್ (62) ಎಂಬವರು ಬಂಧಿತ ಆರೋಪಿಗಳು. ಇದೇ ತಂಡದ ಇಬ್ಬರು ಪೊಲೀಸ್ ಕಾರ್ಯಾಚರಣೆ ವೇಳೆ ತಪ್ಪಿಸಿ ಪರಾರಿಯಾಗಿದ್ದಾರೆ. ಬಂಧಿತರಿಂದ 6.5 ಕಿಲೋ ಗ್ರಾಂ ನಕಲಿ ಒಡವೆ ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ತಾಮ್ರ ಮತ್ತು ಕಾಡ್ಮಿಯಾ ಉಪಯೋಗಿಸಿ ಈ ನಕಲಿ ಆಭರಣಗಳನ್ನು ತಯಾರಿಸಲಾಗಿತ್ತು. ಇದರ ಹೊರತಾಗಿ ಆರೋಪಿಗಳ ಕೈಯಿಂದ ೭ ಗ್ರಾಂ ಅಸಲಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಎಳ್ಳಷ್ಟೂ ಶಂಕೆಬಾರದ ರೀತಿಯಲ್ಲಿ ಈ ಒಡವೆಗಳನ್ನು ತಯಾರಿಸಲಾಗಿದೆ. ಚಿನ್ನದಂಗ ಡಿಯಲ್ಲಿ ಲಭಿಸುವುದಕ್ಕಿಂತಲೂ ಕಡಿಮೆ ಬೆಲೆಗೆ ಚಿನ್ನದೊಡವೆ ನೀಡುವುದಾಗಿ ನಂಬಿಸಿ, ನಕಲಿ ಚಿನ್ನವನ್ನು ಮಾರಾಟಮಾಡಿ ಹಣ ಎಗರಿಸುವುದು ಈ ತಂಡದ ಪ್ರಧಾನ ದಂಧೆಯಾಗಿದೆ. ಹೀಗೆ ಇದನ್ನು ಖರೀದಿಸುವವರಿಗೆ ಅಸಲಿ ಚಿನ್ನವನ್ನು ತೋರಿಸಿ ಅದನ್ನು ಮೊದಲು ಕಲ್ಲಿನಿಂದ ಒರೆಸಿ ಇವರು ತೋರಿಸುತ್ತಾರೆ. ವ್ಯಾಪಾರ ಪಕ್ಕಾಗೊಂಡಲ್ಲಿ ಖರೀದಿದಾರರಿಗೆ ಬಳಿಕ ನಕಲಿ ಒಡವೆ ನೀಡಿ ವಂಚನೆ ನಡೆಸುವುದು ಈ ತಂಡದ ರೀತಿಯಾ ಗಿದೆ. ಈ ವಂಚನೆಗಾರರ ತಂಡದವರನ್ನು ನಿನ್ನೆ ಕಾಸರಗೋಡು ಪ್ರೆಸ್ಕ್ಲಬ್ ಜಂಕ್ಷನ್ ಪರಿಸರದಿಂದ ಕಾಸರಗೋಡು ಪೊಲೀಸರು ಅತೀ ಗುಪ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಈ ತಂಡದವರಿಂದ ಈತನಕ ಯಾರಾದರೂ ನಕಲಿ ಆಭರಣ ಖರೀದಿಸಿ ವಂಚನೆಗೊಳಗಾಗಿದ್ದಾ ರೆಯೇ ಎಂಬ ಬಗ್ಗೆ ಈತನಕ ಯಾವುದೇ ದೂರುಗಳು ಲಭಿಸಿಲ್ಲವೆಂ ದು ಪೊಲೀಸರು ತಿಳಿಸಿದ್ದಾರೆ.
ಈ ತಂಡದವರು ಮೊದಲು ಹೊಸದುರ್ಗ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನ ಮಾರಾಟಗೈಯ್ಯಲೆತ್ನಿಸಿದ್ದರು. ಅದನ್ನು ಕಂಡು ಶಂಕೆಗೊಂಡ ಕೆಲವರು ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ತಂಡ ಒಂದು ವಾರಹಿಂದೆಯೇ ಕಾಸರಗೋಡಿಗೆ ಆಗಮಿಸಿದ್ದು ಬೇಕಲ ಪಳ್ಳಿಕ್ಕೆರೆಯ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದರು. ಮಾತ್ರವಲ್ಲ ಇವರು ತೆಲಂಗಾನ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇಂತಹ ವಂಚನೆ ನಡೆಸಿದ ಬಳಿಕ ಕಾಸರಗೋಡಿಗೆ ಆಗಮಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನೇತೃತ್ವದ ತಂಡ ಮತ್ತು ಕಾಸರಗೋಡು ಪೊಲೀಸರು ಸೇರಿ ತಂಡವನ್ನು ಬಂಧಿಸುವ ಕಾರ್ಯಾಚರಣೆ ನಡೆಸಿದ್ದಾರೆ.






