ನವಯುಗ ಯಾತ್ರೆಗೆ ಸಿದ್ಧವಾದ ಕುಂಬಳೆ: ಯುಡಿಎಫ್ ಕಾರ್ಯಕರ್ತರಲ್ಲಿ ಉತ್ಸಾಹ

ಕುಂಬಳೆ:  ಐಕ್ಯರಂಗದ  ನವಯುಗ ಯಾತ್ರೆ ಚಾಲನೆಗೆ ಕುಂಬಳೆ ಸಿದ್ಧತೆಯಲ್ಲಿದೆ. ಸಂಜೆ 4 ಗಂಟೆಗೆ ವಿಪಕ್ಷ ಮುಖಂಡ ವಿ.ಡಿ. ಸತೀಶನ್‌ರ ನೇತೃತ್ವದಲ್ಲಿರುವ ಯಾತ್ರೆಯನ್ನು ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋ ಪಾಲ್ ಉದ್ಘಾಟಿಸುವರು. ವಿಧಾನಸಭಾ ಚುನಾವಣೆಯ ಮುಂಚಿತವಾಗಿ ನಡೆ ಯುವ ಈ ಯಾತ್ರೆ  ರಾಜ್ಯ  ಆಡಳಿತ ನಡೆಸುವ ಸರಕಾರದ ದುರಾಡಳಿತವನ್ನು ಜನತೆಗೆ ತಿಳಿಸಲು ಉದ್ದೇಶಿಸಿ ಆಗಿದೆ ಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಜಾಥಾದ ಮುಂಚಿತವಾಗಿ ನಾಯಕ ವಿ.ಡಿ. ಸತೀಶನ್ ಕೊಲ್ಲೂರು ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಪ್ರಾರ್ಥನೆ ನಡೆಸಿದರು. ಲೀಗ್ ಮುಖಂಡ ಪಿ.ಕೆ. ಕುಂಞಾಲಿಕುಟ್ಟಿ,ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಾದಿಖಲಿ ಶಿಹಾಬ್ ತಂಙಳ್, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ರಮೇಶ್ ಚೆನ್ನಿತ್ತಲ, ಅಡೂರು ಪ್ರಕಾಶ್, ಶಿಬು ಬೇಬಿಜೋನ್, ದೇವರಾಜನ್, ಸಿ.ಪಿ. ಜೋನ್, ಅನೂಪ್ ಜೇಕಬ್ ಮೊದ ಲಾದವರು ಭಾಗವಹಿಸುವರು. ಉದ್ಘಾಟನೆ ಬಳಿಕ ಕಾಸರಗೋಡಿನಲ್ಲಿ ಸ್ವಾಗತ ನೀಡಲಾಗುವುದು

You cannot copy contents of this page